ಪ್ರೀತಿ ರಥಿ ಮೇಲೆ ಆಸಿಡ್ ದಾಳಿ ಮಾಡಿದ್ದ ಅಂಕುರ್ ಲಾಲ್ ಗೆ ಗಲ್ಲು ಶಿಕ್ಷೆ

ಮುಂಬೈ ರೈಲ್ವೆ ನಿಲ್ದಾಣದಲ್ಲಿ 23 ವರ್ಷದ ನರ್ಸ್ ಪ್ರೀತಿ ರಥಿ ಮೇಲೆ ಆಸಿಡ್ ದಾಳಿ ನಡೆಸಿದ್ದ ಅಂಕುರ್ ಲಾಲ್ ಪನ್ವರ್ ನನ್ನು ಗಲ್ಲಿಗೇರಿಸಬೇಕು...
ಪ್ರೀತಿ ರಥಿ
ಪ್ರೀತಿ ರಥಿ

ಮುಂಬೈ: ಮುಂಬೈ ರೈಲ್ವೆ ನಿಲ್ದಾಣದಲ್ಲಿ 23 ವರ್ಷದ ನರ್ಸ್ ಪ್ರೀತಿ ರಥಿ ಮೇಲೆ ಆಸಿಡ್ ದಾಳಿ ನಡೆಸಿದ್ದ ಅಂಕುರ್ ಲಾಲ್ ಪನ್ವರ್ ನನ್ನು ಗಲ್ಲಿಗೇರಿಸಬೇಕು ಎಂದು ಕೋರ್ಟ್ ಗುರುವಾರ ತೀರ್ಪು ನೀಡಿದೆ.

ದೆಹಲಿಯಲ್ಲಿ ರಥಿಯ ಮನೆಯ ಪಕ್ಕದಲ್ಲೇ ವಾಸವಾಗಿದ್ದ 26 ವರ್ಷದ ಅಂಕುರ್ ಪನ್ವರ್ ಅಪರಾಧಿ ಎಂದು ಕಳೆದ ವಾರ ವಿಶೇಷ ಮಹಿಳಾ ಕೋರ್ಟ್ ತೀರ್ಪು ನೀಡಿತ್ತು. ಇಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ ವಿಶೇಷ ನ್ಯಾಯಾಧೀಶೆ ಎ.ಎಸ್. ಶಿಂಧೆ ಅವರು, ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಿದ್ದಾರೆ.

ಆಸಿಡ್ ದಾಳಿ ಮಹಿಳೆಯರ ವಿರುದ್ಧದ ಅಪರಾಧವಾಗಿದೆ ಮತ್ತು ಪನ್ವರ್ ಕೋಪದಿಂದ ಆ ಕ್ಷಣದಲ್ಲೇ ಆಸಿಡ್ ಹಾಕಿಲ್ಲ. ಇದೊಂದು ಪೂರ್ವ ನಿಯೋಜಿತ ದಾಳಿ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ನಿನ್ನೆ ಅಂತಿಮ ಸುತ್ತಿನ ವಾದ ಮಂಡಿಸಿದ್ದ ಸರ್ಕಾರಿ ಅಭಿಯೋಜಕ ಉಜ್ವಲ್ ನಿಕಮ್ ಅವರು, ಇದು ಅತ್ಯಂತ ವಿರಳ ಪ್ರಕರಣವಾಗಿದ್ದು ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಒಂದು ವೇಳೆ ಅದಕ್ಕಿಂತ ಕಡಿಮೆ ಶಿಕ್ಷೆ ವಿಧಿಸಿದರೆ ಜೈಲಿನಿಂದ ಹೊರಬಂದ ನಂತರ ಬೆರೆ ಯುವತಿಯರಿಗೆ ಅಪಾಯ ತಪ್ಪಿದ್ದಲ್ಲ ಎಂದು ವಾದಿಸಿದ್ದರು.

2013ರಲ್ಲಿ ಪ್ರೀತಿ ರಥಿ ಅವರು ತಮ್ಮ ತಂದೆ ಅಮರ್ ಸಿಂಗ್ ರಥಿ ಅವರೊಂದಿಗೆ ದೆಹಲಿಯಿಂದ ಮುಂಬೈಗೆ ತೆರಳಿದ್ದ ವೇಳೆ ಬಾಂದ್ರಾ ರೇಲ್ವೆ ನಿಲ್ದಾಣದಲ್ಲಿ ಪನ್ವರ್ ರಥಿ ಮೇಲೆ ಆಸಿಡ್ ದಾಳಿ ನಡೆಸಿದ್ದ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com