ನನ್ನ ಮೇಲೆ ದಾಳಿ ನಡೆದರೆ ಭಾರತೀಯ ಮುಸ್ಲಿಮರ ಮೇಲೆ ದಾಳಿ ನಡೆದಂತೆ: ಜಾಕಿರ್ ನಾಯ್ಕ್

ಇಸ್ಲಾಮ್ ಧರ್ಮದ ವಿವಾದಿತ ಧರ್ಮ ಪ್ರಚಾರಕ ಜಾಕಿರ್ ನಾಯ್ಕ್, ತಮ್ಮ ವಿರುದ್ಧ ದಾಳಿ ನಡೆದರೆ ಅದು ಭಾರತೀಯ ಮುಸ್ಲಿಮರ ಮೇಲೆ ದಾಳಿ ನಡೆದಂತೆ ಎಂದು ಎಚ್ಚರಿಸಿದ್ದಾರೆ.
ಜಾಕಿರ್ ನಾಯ್ಕ್
ಜಾಕಿರ್ ನಾಯ್ಕ್

ನವದೆಹಲಿ: ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್(ಐಆರ್ ಎಫ್) ನ್ನು ನಿಷೇಧಿಸುವುದರ ವಿರುದ್ಧ ಎಚ್ಚರಿಕೆ ನೀಡಿರುವ ಇಸ್ಲಾಮ್ ಧರ್ಮದ ವಿವಾದಿತ ಧರ್ಮ ಪ್ರಚಾರಕ ಜಾಕಿರ್ ನಾಯ್ಕ್, ತಮ್ಮ ವಿರುದ್ಧ ದಾಳಿ ನಡೆದರೆ ಅದು ಭಾರತೀಯ ಮುಸ್ಲಿಮರ ಮೇಲೆ ದಾಳಿ ನಡೆದಂತೆ ಎಂದು ಎಚ್ಚರಿಸಿದ್ದಾರೆ.

ಸರ್ಕಾರಕ್ಕೆ ನೇರ ಪತ್ರ ಬರೆದಿರುವ ಜಾಕಿರ್ ನಾಯ್ಕ್, ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದು, ಯಾವುದೇ ತಪ್ಪು ಮಾಡಿಲ್ಲ, ಆದ್ದರಿಂದ ನನ್ನನ್ನು ಭಾರತದ ಶತ್ರುವಿನಂತೆ ಬಿಂಬಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಬಾಂಗ್ಲಾದಲ್ಲಿ ದಾಳಿ ನಡೆಸಿದ ಭಯೋತ್ಪಾದಕರಿಗೆ ಜಾಕಿರ್ ನಾಯ್ಕ್ ಸ್ಫೂರ್ತಿಯಾಗಿದ್ದರು ಎಂಬ ವಿಷಯ ಬಹಿರಂಗವಾಗುತ್ತಿದ್ದಂತೆ ಭಾರತದ ಗುಪ್ತಚರ ದಳ ಜಾಕಿರ್ ನಾಯ್ಕ್ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿವೆ. ಅಷ್ಟೇ ಅಲ್ಲದೆ ದೇಶದ ಭದ್ರತಾ ಸಂಸ್ಥೆಗಳು ಜಾಕಿರ್ ನಾಯ್ಕ್ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ಗೆ ನಿಷೇಧ ವಿಧಿಸುವ ಚಿಂತನೆ ನಡೆಸಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಎಚ್ಚರಿಕೆ ನೀಡಿರುವ ಜಾಕಿರ್ ನಾಯ್ಕ್, ಐಆರ್ ಎಫ್ ಗೆ ನಿಷೇಧ ವಿಧಿಸಿದರೆ ಅದು ದೇಶದ ಪ್ರಜಾಪ್ರಭುತ್ವದ ಮೇಲೆ ಇತ್ತೀಚಿನ ದಿನಗಳಲ್ಲಿ ಬಿದ್ದ ಅತಿ ದೊಡ್ಡ ಹೊಡೆತವಾಗಿರಲಿದೆ, ನನ್ನ ಮೇಲೆ ನಡೆಯುವ ದಾಳಿ ಇಡೀ ಭಾರತೀಯ ಮುಸ್ಲಿಮರ ಮೇಲೆ ದಾಳಿ ನಡೆದಂತೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com