ಚೆನ್ನೈ: ದೇಶಸೇವೆಯಲ್ಲಿ ತಮ್ಮನ್ನು ತಾವು ಸ್ವಯಂಪ್ರೇರಿತವಾಗಿ ತೊಡಗಿಸಿಕೊಳ್ಳುವಂತೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ದೇಶದ ಜನತೆಗೆ ಕರೆ ನೀಡಿದ್ದಾರೆ. ಯುವಜನತೆ ತಮ್ಮ ಜೀವಪಾಯದ ಸಂದರ್ಭದಲ್ಲಿ ಕೂಡ ನಿಸ್ವಾರ್ಥವಾಗಿ ದಣಿವರಿಯದಂತೆ ದೇಶದ ಒಳಿತಿಗೆ ಕೆಲಸ ಮಾಡಬೇಕೆಂದು ಅವರು ಹೇಳಿದ್ದಾರೆ.
ಚೆನ್ನೈಯಲ್ಲಿ ಅವರು ಇಂದು ಸೈನಿಕ ಅಧಿಕಾರಿಗಳ ತರಬೇತಿ ಶಿಕ್ಷಣ ಶಾಲೆಯಲ್ಲಿ ಬೇಸಿಗೆ ಅವಧಿಯ ಕ್ಯಡೆಟ್ ಮುಗಿಸಿದವರ ಪಥಸಂಚಲನವನ್ನು ವೀಕ್ಷಿಸಿ ಮಾತನಾಡಿದ ಅವರು, ಇಂದು ನಮ್ಮ ದೇಶವನ್ನು ಮುನ್ನಡೆಸುವ ಸವಾಲುಗಳನ್ನು ದಿಟ್ಟತನದಿಂದ ಎದುರಿಸುವ ಯುವ ಸಮೂಹದ ಅವಶ್ಯಕತೆಯಿದೆ ಎಂದು ಪ್ರತಿಪಾದಿಸಿದರು.
ಕ್ಯಡೆಟ್ ಗಳ ಹೊಸ ವಿಭಾಗವನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶವನ್ನು ಕಾಪಾಡಿ ಅದರ ಏಕತೆಯನ್ನು ರಕ್ಷಿಸುವಲ್ಲಿ ಕ್ಯಡೆಟ್ ಗಳ ಪಾತ್ರ ಗುರುತರವಾಗಿದೆ ಎಂದರು.
'' ನಿಮ್ಮ ಪ್ರತಿ ಕೆಲಸವನ್ನು ಈ ದೇಶದ ಶತಕೋಟಿ ಜನರು ಗಮನಿಸುತ್ತಿದ್ದಾರೆ, ನೀವು ಮಾಡುವ ಒಳ್ಳೆಯ ಕೆಲಸಗಳನ್ನು ಶ್ಲಾಘಿಸುತ್ತಾರೆ, ನಿಮಗೆ ಗೌರವ ಕೊಡುತ್ತಾರೆ ಎಂಬುದನ್ನು ಯಾವತ್ತೂ ನೆನಪಿಟ್ಟುಕೊಳ್ಳಿ. ನೀವು ದೇಶಸೇವೆ ಮಾಡುತ್ತಿದ್ದೀರಿ. ಯುವಕ-ಯುವತಿಯರಾದ ನಿಮ್ಮ ಜವಾಬ್ದಾರಿಯಿಂದ, ನಿಮ್ಮ ವೃತ್ತಿಪರತೆಯಿಂದ ಭಾರತದ ಸೇನೆ ಇನ್ನಷ್ಟು ಎತ್ತರಕ್ಕೆ ಏರಲಿ ಎಂದು ಹೇಳಿದರು.
ಗಡಿ ಭಾಗದಲ್ಲಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಲ್ಲಿಯವರೆಗೆ ಇದ್ದ ಸಾಂಪ್ರದಾಯಿಕ ಬೆದರಿಕೆಗಳನ್ನು ಮೀರಿ ಭಾರತದ ಭದ್ರತಾ ಸವಾಲುಗಳು ಬೆಳೆದಿವೆ ಎಂದು ಹೇಳಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಆಂತರಿಕ ಬಿಕ್ಕಟ್ಟಿನ ವಿಷಯದಲ್ಲಿ ರಾಷ್ಟ್ರದ ಸಶಸ್ತ್ರ ಪಡೆಗಳ ಮೇಲೆ ದೇಶ ಅವಲಂಬಿತವಾಗಿದೆ ಎಂದು ಹೇಳಿದರು.
21ನೇ ಶತಮಾನದಲ್ಲಿ ನಮ್ಮ ದೇಶ ಹೊಸ ಸವಾಲುಗಳನ್ನು ಕಂಡಿದೆ. ಪ್ರಕ್ಷುಬ್ಧ ಮತ್ತು ಅನಿಶ್ಚಿತತೆ ಮಾನವಕುಲದ ಇತಿಹಾಸದಲ್ಲಿ ಉದ್ದಕ್ಕೂ ಬಿಂಬಿತವಾಗಿದ್ದರೂ ಕೂಡ ಈ ಶತಮಾನ ಅವ್ಯವಸ್ಥೆ ಮತ್ತು ಬಹಳ ವಿಷಪೂರಿತ ಪ್ರಕೃತಿಯನ್ನು ಕಂಡಿದೆ. ರಾಜ್ಯ, ರಾಜ್ಯಗಳು, ದೇಶ,ದೇಶಗಳ ಮಧ್ಯೆ ಕದನ, ಕಲಹ ಉಂಟಾಗುತ್ತಿದೆ ಎಂದರು.
ಕ್ಯಡೆಟ್ ಗಳ ನಾಯಕತ್ವ ಗುಣಗಳನ್ನು ಪರೀಕ್ಷೆಗೆ ಹಚ್ಚುವ ಸಮಯ ಬಂದಿದೆ ಎಂದು ಹೇಳಿದ ರಾಷ್ಟ್ರಪತಿ ಭವಿಷ್ಯದ ಸೈನಿಕರಾದ ನಿಮ್ಮ ಮೇಲೆ ಈ ದೇಶದ ಶತಕೋಟಿ ಜನರು ಭರವಸೆಯಿಟ್ಟಿದ್ದಾರೆ ಎಂದು ಹೇಳಿದರು.