ರಾಜೀವ್ ಗಾಂಧಿ ಫೌಂಡೇಶನ್ ಗೆ ಜಾಕಿರ್ ನಾಯ್ಕ್ 50 ಲಕ್ಷ ರೂ. ದೇಣಿಗೆ: ಸುಬ್ರಹ್ಮಣಿಯನ್ ಸ್ವಾಮಿ

ಬಿಜೆಪಿ ಸಂಸದ ಸುಬ್ರಹ್ಮಣಿಯನ್ ಸ್ವಾಮಿ ಎಲ್ಲರ ಹುಬ್ಬೇರಿಸುವಂತಹ ಆರೋಪಮಾಡಿದ್ದು, ಇಸ್ಲಾಮ್ ಧರ್ಮದ ವಿವಾದಿತ ಧಾರ್ಮ ಪ್ರಚಾರಕ ಜಾಕಿರ್ ನಾಯ್ಕ್ ರಾಜೀವ್ ಗಾಂಧಿ ಫೌಂಡೇಶನ್ ಗೆ 50 ಲಕ್ಷ ರೂ ದೇಣಿಗೆ ನೀಡಿದ್ದಾರೆ ಎಂದು ಹೇಳಿದ್ದಾರೆ.
ಸುಬ್ರಹ್ಮಣಿಯನ್ ಸ್ವಾಮಿ
ಸುಬ್ರಹ್ಮಣಿಯನ್ ಸ್ವಾಮಿ

ನವದೆಹಲಿ: ಬಿಜೆಪಿ ಸಂಸದ ಸುಬ್ರಹ್ಮಣಿಯನ್ ಸ್ವಾಮಿ ಎಲ್ಲರ ಹುಬ್ಬೇರಿಸುವಂತಹ ಆರೋಪಮಾಡಿದ್ದು, ಇಸ್ಲಾಮ್ ಧರ್ಮದ ವಿವಾದಿತ ಧಾರ್ಮ ಪ್ರಚಾರಕ ಜಾಕಿರ್ ನಾಯ್ಕ್ ರಾಜೀವ್ ಗಾಂಧಿ ಫೌಂಡೇಶನ್ ಗೆ 50 ಲಕ್ಷ ರೂ ದೇಣಿಗೆ ನೀಡಿದ್ದಾರೆ ಎಂದು ಹೇಳಿದ್ದಾರೆ.

2011 ರಲ್ಲಿ ಜಾಕಿರ್ ನಾಯ್ಕ್ ರಾಜೀವ್ ಗಾಂಧಿ ಫೌಂಡೇಶನ್ ಗೆ 50 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ ಎಂದು ಸುಬ್ರಹ್ಮಣಿಯನ್ ಸ್ವಾಮಿ ಟ್ವಿಟರ್ ನಲ್ಲಿ ಹೇಳಿದ್ದಾರೆ. ಬಾಂಗ್ಲಾದಲ್ಲಿ ಭಯೋತ್ಪಾದಕ ದಾಳಿ ನಡೆಸಿದ ಉಗ್ರರಿಗೆ ಜಾಕಿರ್ ನಾಯ್ಕ್ ನ ಬೋಧನೆಗಳು ಪ್ರೇರಣೆ ನೀಡಿದ್ದವು ಎಂಬ ಅಂಶ ಬಹಿರಂಗವಾಗುತ್ತಿದ್ದಂತೆ ಭಾರತದ ಗುಪ್ತಚರ ಇಲಾಖೆ ಜಾಕಿರ್ ನಾಯ್ಕ್ ನ ಚಲನವಲನಗಳ ಬಗ್ಗೆ ನಿಗಾವಹಿಸಿದೆ. ಅಷ್ಟೇ ಅಲ್ಲದೆ ಜಾಕಿರ್ ನಾಯ್ಕ್ ನೇತೃತ್ವದ ಎನ್ ಜಿಒ ವಿದೇಶಿ ದೇಣಿಗೆ ಪಡೆಯುವುದನ್ನು ನಿರ್ಬಂಧಿಸಲಾಗಿದೆ. 1991 ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ರಾಜೀವ್ ಗಾಂಧಿ ಫೌಂಡೇಶನ್ ನ್ನು ಸ್ಥಾಪಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com