ಗಲಭೆ ಪೀಡಿತ ಕಾಶ್ಮೀರದಲ್ಲಿ ಸಾವಿನ ಸಂಖ್ಯೆ 80 ಕ್ಕೆ ಏರಿಕೆ

ಕಾಶ್ಮೀರದಲ್ಲಿ ನಡೆಯುತ್ತಿರುವ ಗಲಭೆಯಲ್ಲಿ ಮೃತಪಟ್ಟವರ ಸಂಖ್ಯೆ 80 ಕ್ಕೆ ಏರಿಕೆಯಾಗಿದೆ.
ಗಲಭೆ ಪೀಡಿತ ಕಾಶ್ಮೀರದಲ್ಲಿ ಸಾವಿನ ಸಂಖ್ಯೆ 80 ಕ್ಕೆ ಏರಿಕೆ
ಗಲಭೆ ಪೀಡಿತ ಕಾಶ್ಮೀರದಲ್ಲಿ ಸಾವಿನ ಸಂಖ್ಯೆ 80 ಕ್ಕೆ ಏರಿಕೆ

ಶ್ರೀನಗರ: ಕಾಶ್ಮೀರದಲ್ಲಿ ನಡೆಯುತ್ತಿರುವ ಗಲಭೆಯಲ್ಲಿ ಮೃತಪಟ್ಟವರ ಸಂಖ್ಯೆ 80 ಕ್ಕೆ ಏರಿಕೆಯಾಗಿದೆ.

ಗಲಭೆಯಲ್ಲಿ ಗಾಯಗೊಂಡಿದ್ದ ಯುವಕ ಜಾವಿದ್ ಅಹ್ಮದ್ ದರ್  ಶ್ರೀನಗರದಲ್ಲಿ ಸಾವನ್ನಪ್ಪಿದ್ದು ಸಾವಿನ ಸಂಖ್ಯೆ 80 ಕ್ಕೇರಿದೆ. ಮೃತಪಟ್ಟ ಯುವಕ ಆ.5 ರಂದು ಭದ್ರತಾಪಡೆ ಹಾಗೂ ಪ್ರತಿಭಟನಾ ನಿರತರ ನಡುವೆ ನಡೆದ ಘರ್ಷಣೆಯಲ್ಲಿ ಯುವಕ ಗಾಯಗೊಂಡಿದ್ದ. 
ಇದೇ ವೇಳೆ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಪ್ರತಿಭಟನಾ ನಿರತರು ಆಜಾದಿ ಘೋಷಣೆಗಳನ್ನು ಕೂಗಿದ್ದು, ಪ್ರತ್ಯೇಕತಾವಾದಿಗಳು ಕರೆ ನೀಡಿದ್ದ ಯುಎನ್ ಚಲೋ ಜಾಥಾ ಸಹ ನಡೆದಿದೆ. ಪುಲ್ವಾಮಾ ಜಿಲ್ಲೆಯಲ್ಲಿ ಭಾನುವಾರ ನಡೆದ ಘರ್ಷಣೆಯಲ್ಲಿ 80 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪರಿಣಾಮವಾಗಿ ಕಾಶ್ಮೀರದಲ್ಲಿ 65 ನೇ ದಿನವೂ ಕಾಶ್ಮೀರದಲ್ಲಿ ಪ್ರಕ್ಷುಬ್ಧ ವಾತಾವರಣ ಹಾಗೂ ಕರ್ಫ್ಯೂ ಮುಂದುವರೆದಿದೆ. ಕಾಶ್ಮೀರದಲ್ಲಿ ಪ್ರಕ್ಷುಬ್ಧ ವಾತಾವರಣ ಮುಂದೂವರೆದಿದ್ದರೂ ಕಣಿವೆಯಲ್ಲಿ ಕರ್ಫ್ಯೂ ವಿಧಿಸಲಾಗಿಲ್ಲ.ಇನ್ನು ಜುಲೈ.9 ರಿಂದ ನಡೆದ ಗಲಭೆಗಳಲ್ಲಿ ಈ ವರೆಗೂ 11,500 ಜನರು ಗಾಯಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com