ಕಾವೇರಿ ಪ್ರತಿಭಟನೆ ಹಿನ್ನೆಲೆ; ತಮಿಳು ನಾಡಿನಿಂದ ಬೆಂಗಳೂರಿಗೆ 5 ದಿನ ಬಸ್ ಸ್ಥಗಿತ: ಸುಮಾರು 57 ಲಕ್ಷ ರೂ.ನಷ್ಟ

ಕಾವೇರಿ ನೀರು ಬಿಡುಗಡೆ ಸಂಬಂಧ ಪ್ರತಿಭಟನೆಯಿಂದಾಗಿ ಹೊಸೂರು-ಬೆಂಗಳೂರು ನಡುವೆ ತಮಿಳು ನಾಡು ರಾಜ್ಯ ಸಾರಿಗೆ...
ಬೆಂಗಳೂರಿನ ಹೊರವಲಯ ಸ್ಯಾಟಲೈಟ್ ಬಸ್ ಡಿಪೊದಲ್ಲಿ ನಿಂತಿರುವ ತಮಿಳು ನಾಡು ರಾಜ್ಯ ಸಾರಿಗೆ ಬಸ್ಸುಗಳು
ಬೆಂಗಳೂರಿನ ಹೊರವಲಯ ಸ್ಯಾಟಲೈಟ್ ಬಸ್ ಡಿಪೊದಲ್ಲಿ ನಿಂತಿರುವ ತಮಿಳು ನಾಡು ರಾಜ್ಯ ಸಾರಿಗೆ ಬಸ್ಸುಗಳು
ಕೃಷ್ಣಗಿರಿ: ಕಾವೇರಿ ನೀರು ಬಿಡುಗಡೆ ಸಂಬಂಧ ಪ್ರತಿಭಟನೆಯಿಂದಾಗಿ ಹೊಸೂರು-ಬೆಂಗಳೂರು ನಡುವೆ ತಮಿಳು ನಾಡು ರಾಜ್ಯ ಸಾರಿಗೆ ನಿಗಮದ ಸೇವೆ 5 ದಿನಗಳ ನಂತರ ನಿನ್ನೆ(ಭಾನುವಾರ) ಮತ್ತೆ ಆರಂಭಗೊಂಡಿತು. 5 ದಿನಗಳ ಬಸ್ಸು ಸಂಚಾರ ಸ್ಥಗಿತದಿಂದ ತಮಿಳು ನಾಡು ಸರ್ಕಾರಕ್ಕೆ ಸುಮಾರು 57 ಲಕ್ಷ ರೂಪಾಯಿ ನಷ್ಟವುಂಟಾಗಿದೆ.
ಸುಪ್ರೀಂ ಕೋರ್ಟ್ ಆದೇಶದಂತೆ ಕರ್ನಾಟಕ ತಮಿಳು ನಾಡಿಗೆ ಕೃಷಿ ಚಟುವಟಿಕೆಗೆ 10 ದಿನಗಳ ಕಾಲ ಕಾವೇರಿ ನೀರು ಬಿಡುಗಡೆ ಮಾಡಲು ಆರಂಭಿಸಿತ್ತು. ಇದನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ವ್ಯಾಪಕ ಹೋರಾಟ ನಡೆಸುತ್ತಿದ್ದವು. ಇದರಿಂದಾಗಿ ಮುಂಜಾಗ್ರತಾ ಕ್ರಮವಾಗಿ ಹೊಸೂರು-ಬೆಂಗಳೂರು ರಸ್ತೆಯಲ್ಲಿ ತಮಿಳು ನಾಡು ಬಸ್ಸುಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿತ್ತು. ತಮಿಳು ನಾಡು ದಾಖಲಾತಿ ಹೊಂದಿರುವ ಟ್ರಕ್ಸ್, ಕಾರು, ದ್ವಿಚಕ್ರ ವಾಹನಗಳನ್ನು ಕೂಡ ಕೃಷ್ಣಗಿರಿ ಗೇಟ್, ಶೂಲಗಿರಿ ಮತ್ತು ಅತ್ತಿಬೆಲೆ ಗಡಿಯಲ್ಲಿ ನಿಲ್ಲಿಸಲಾಗುತ್ತಿತ್ತು. ಅಗತ್ಯ ವಸ್ತುಗಳಾದ ಹಾಲು, ಪೆಟ್ರೋಲ್ ಮೊದಲಾದವುಗಳನ್ನು ಹೊತ್ತ ವಾಹನಗಳನ್ನು ಮಾತ್ರ ಬಿಡಲಾಗುತ್ತಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com