
ನವದೆಹಲಿ: ಅರುಣಾಚಲ ಪ್ರದೇಶ ರಾಜ್ಯಪಾಲ ಜ್ಯೋತಿಪ್ರಸಾದ್ ರಾಜ್‍ಖೋವ ಅವರನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹುದ್ದೆಯಿಂದೆ ತೆರವುಗೊಳಿಸಿ, ಮೇಘಾಲಯ ರಾಜ್ಯಪಾಲರಿಗೆ ಮೇಲುಸ್ತುವಾರಿ ವಹಿಸಿದ್ದಾರೆ.
ಈಶಾನ್ಯ ರಾಜ್ಯಗಳ ಅಭಿವೃದ್ಧಿ ಸಂಬಂಧ ಚುನಾಯಿತ ಸರ್ಕಾರಕ್ಕೆ ರಾಜ್ಯಪಾಲರು ಅವಮಾನ ಮಾಡುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದ ಹಿನ್ನೆಲೆಯಲ್ಲಿ ರಾಜ್ಯಪಾಲರನ್ನು ತೆಗೆದು ಹಾಕಲಾಗಿದೆ.
ಒಮ್ಮೆ ರಾಜ್ಯಪಾಲರಾಗಿ ನೇಮಕವಾದರೇ ಅವರಿಗೆ ಐದು ವರ್ಷ ಅಧಿಕಾರವಧಿ ಇರುತ್ತದೆ. ಆದರೇ ರಾಷ್ಟ್ರಪತಿಗಳ ಇಚ್ಟೆಯ ಮೇರೆಗೆ ಜೆಪಿ ರಾಜಖೋವಾ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ.
ಕಳೆದ ವರ್ಷ ಮೇ ತಿಂಗಳಲ್ಲಿ ಖೋವಾ ಅರುಣಾಚಲ ಪ್ರದೇಶ ರಾಜ್ಯಪಾಲರಾಗಿ ಆಯ್ಕೆಯಾಗಿದ್ದರು. ಪದೇ ಪದೇ ಖೋವಾ ಅನಾರೋಗ್ಯದಿಂದ ಬಳಲುತ್ತಿದ್ದರು.
Advertisement