ಲಖನೌ: ಲಂಚ ಸ್ವೀಕಾರದ ಆರೋಪದ ಮೇಲೆ ಗಣಿ ಸಚಿವೆ ಗಾಯತ್ರಿ ಪ್ರಜಾಪತಿ ಮತ್ತು ಪಂಚಾಯತ್ ರಾಜ್ ರಾಜ್ಯ ಸಚಿವ ರಾಜ್ ಕಿಶೋರ್ ಅವರನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸೋಮವಾರ ವಜಾ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಇಬ್ಬರನ್ನು ವಜಾ ಮಾಡಲು ಅನುಮೋದಿಸಿ ಒಪ್ಪಿಗೆಗಾಗಿ ರಾಜ್ಯಪಾಲ ರಾಮ ನಾಯಕ್ ಅವರಿಗೆ ಪಾತ್ರ ಬರೆಯಲಾಗಿದೆ ಎಂದು ತಿಳಿದುಬಂದಿದೆ.
ಗಣಿ ಒಪ್ಪಂದಗಳಲ್ಲಿ ಲಂಚ ಪಡೆದ ಆರೋಪವನ್ನು ಪ್ರಜಾಪತಿ ಎದುರಿಸುತ್ತಿದ್ದರೆ, ಕಿಶೋರ್ ಅವರು ಜಮೀನು ಕಬಳಿಕೆ ಮತ್ತು ಒತ್ತಾಯದ ವಸೂಲಿ ಆರೋಪಗಳನ್ನು ಎದುರಿಸುತ್ತಿದ್ದಾರೆ.
ಪ್ರಜಾಪತಿ ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಅವರಿಗೆ ಆಪ್ತರು ಎಂದೇ ಪರಿಗಣಿಸಲಾಗಿತ್ತು.
ಅಲ್ಲಹಾಬಾದ್ ಹೈಕೋರ್ಟ್ ಗಣಿ ಹಗರಣದಲ್ಲಿ ಸಿಬಿಐ ತನಿಖೆಗೆ ಆದೇಶಿಸಿರುವ ಹಿನ್ನಲೆಯಲ್ಲಿ ಈ ಕ್ರಮಕ್ಕೆ ಮುಖ್ಯಮಂತ್ರಿ ಮುಂದಾಗಿದ್ದಾರೆ.
ಸಿಬಿಐ ತನಿಖೆ ಆದೇಶ ಹಿಂಪಡೆಯುವಂತೆ ಕೋರ್ಟ್ ಗೆ ಸರ್ಕಾರ ಮನವಿ ಮಾಡಿ ಅರ್ಜಿ ಸಲ್ಲಿಸಿತ್ತು ಆದರೆ ಇದಕ್ಕೆ ಕೋರ್ಟ್ ನಿರಾಕರಿಸಿದೆ. ಈ ಪ್ರಕರಣದ ವಿಚಾರಣೆ ಸೋಮವಾರ ಮಧ್ಯಾಹ್ನ ಮುಂದುವರೆಯಲಿದೆ.