ಕುರಿ ಆಕಾರದ ಕೇಕ್ ಕತ್ತರಿಸಿ ಮುಸ್ಲಿಂ ರಾಷ್ಟ್ರೀಯ ಮಂಚ್ ನಿಂದ ಪರಿಸರ ಸ್ನೇಹಿ ಬಕ್ರೀದ್ ಆಚರಣೆ!

ಮುಸ್ಲಿಮರ ಪವಿತ್ರ ಹಬ್ಬ ಬಕ್ರೀದ್ ನ್ನು ಆರ್ ಎಸ್ ಎಸ್ ನ ಮುಸ್ಲಿಮ್ ಘಟಕ ಪರಿಸರಸ್ನೇಹಿಯಾಗಿ ಆಚರಿಸಲು ನಿರ್ಧರಿಸಿದೆ.
ಕೇಕ್(ಸಂಗ್ರಹ ಚಿತ್ರ)
ಕೇಕ್(ಸಂಗ್ರಹ ಚಿತ್ರ)
ಲಖನೌ: ಮುಸ್ಲಿಮರ ಪವಿತ್ರ ಹಬ್ಬ ಬಕ್ರೀದ್ ನ್ನು ಆರ್ ಎಸ್ ಎಸ್ ನ ಮುಸ್ಲಿಮ್ ಘಟಕ ಪರಿಸರಸ್ನೇಹಿಯಾಗಿ ಆಚರಿಸಲು ನಿರ್ಧರಿಸಿದೆ. 
ಸಾಮಾನ್ಯವಾಗಿ ಬಕ್ರೀದ್ ದಿನದಂದು ಪ್ರಾಣಿಗಳನ್ನು ಬಲಿಕೊಟ್ಟು ಹಬ್ಬವನ್ನು ಆಚರಿಸುತ್ತಾರೆ. ಆದರೆ ಆರ್ ಎಸ್ ಎಸ್ ನ ಮುಸ್ಲಿಂ ಘಟಕ ಮುಸ್ಲಿಂ ರಾಷ್ಟ್ರೀಯ ಮಂಚ್ ನ ಕಾರ್ಯಕರ್ತರು ಕುರಿ ಆಕಾರದ ಕೇಕ್ ನ್ನು ಕತ್ತರಿಸುವ ಮೂಲಕ ಪರಿಸರ ಸ್ನೇಹಿ ಬಕ್ರೀದ್ ನ್ನು ಆಚರಣೆ ಮಾಡಲು ತೀರ್ಮಾನಿಸಿದ್ದಾರೆ. 
ಲಖನೌದಲ್ಲಿರುವ ಪಕ್ಷದ ಕಚೇರಿಯಲ್ಲಿ 5 ಕೆಜಿ ತೂಕದ ಕೇಕ್ ನ್ನು ಕತ್ತರಿಸಲು ಸಿದ್ಧತೆ ನಡೆಸಲಾಗಿದ್ದು, ಮುಸ್ಲಿಂ ರಾಷ್ಟ್ರೀಯ ಮಂಚ್ ನ ಕಾರ್ಯಕರ್ತರು ತಮ್ಮ ಮನೆಗಳಲ್ಲಿಯೂ ಸಹ ಬಿರ್ಯಾನಿ ತಯಾರಿಸದೇ ಇರಲು ನಿರ್ಧರಿಸಿದ್ದಾರೆ. ಬದಲಾಗಿ ದಹಿ ವಡಾ ಹಾಗೂ ಇನ್ನಿತರ ತಿನಿಸುಗಳನ್ನು ತಯಾರಿಸಲಿದ್ದಾರೆ ಎಂದು ತಿಳಿದುಬಂದಿದೆ. ಪ್ರಾಣಿಗಳನ್ನು ಬಲಿ ಕೊಡದೇ ಇರುವುದು ಪರಿಸರಕ್ಕೆ ಒಳಿತು ಎಂಬ ಕಾರಣದಿಂದ ಈ ಬಾರಿ ಬಕ್ರೀದ್ ನ್ನು ಹಾಗೂ ಇನ್ನಿತರ ಸಮಾರಂಭ, ಹಬ್ಬಗಳ ವೇಳೆ ಪ್ರಾಣಿ ಬಲಿ ಕೊಡದಂತೆ ಹಲವು ಪರಿಸರವಾದಿಗಳು ಜಾಗೃತಿ ಮೂಡಿಸುವ ಕೆಲಸದಲ್ಲಿ ತೊಡಗಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com