
ನವದೆಹಲಿ: 'ನರೇಂದ್ರ ಮೋದಿ ಭಾರತದ ಪ್ರಧಾನಿಯಾಗುತ್ತಾರೆ ಎಂದು 500 ವರ್ಷಗಳ ಹಿಂದೆಯೇ ನಾಸ್ಟ್ರಾಡಾಮಸ್ ಎಂಬ ಫ್ರೆಂಚ್ ಜ್ಯೋತಿಷಿ ಹೇಳಿದ್ದ ವಿಷಯ ಹಳೆಯದು. ಹೊಸ ವಿಷಯ ಏನಪ್ಪಾ ಅಂದರೆ, ನರೇಂದ್ರ ಮೋದಿ ಪ್ರಧಾನಿಯಾಗುತ್ತಾರೆ ಎಂದು 1990 ರಲ್ಲಿ ಉದ್ಯಮಿ ಧೀರೂಭಾಯ್ ಅಂಬಾನಿ ಹೇಳಿದ್ದರಂತೆ.
ರಿಲಾಯನ್ಸ್ ಸಮೂಹದ ಅಧ್ಯಕ್ಷ ಅನಿಲ್ ಅಂಬಾನಿ ಈ ವಿಷಯವನ್ನು ಬಹಿರಂಗಗೊಳಿಸಿದ್ದು, ಹಿಂದೊಮ್ಮೆ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡುತ್ತಾ, "ದೀರ್ಘಾವಧಿಯಲ್ಲಿ ನರೇಂದ್ರ ಮೋದಿ ಒಳ್ಳೆಯ ನಾಯಕರಾಗಲಿದ್ದಾರೆ ಎಂದು ಹೇಳಿದ್ದರು" ಎಂದಿದ್ದಾರೆ.
ನರೇಂದ್ರ ಮೋದಿ 2001 ರಲ್ಲಿ ಗುಜರಾತ್ ನ ಮುಖ್ಯಮಂತ್ರಿಯಾಗುವುದಕ್ಕೂ ಮುನ್ನ ಅಂದರೆ 1990 ರಲ್ಲಿ ನರೇಂದ್ರ ಮೋದಿ ಅವರನ್ನು ಧೀರೂಭಾಯ್ ಅಂಬಾನಿ ತಮ್ಮ ನಿವಾಸಕ್ಕೆ ಆಹ್ವಾನಿಸಿದ್ದರು. "ಸುದೀರ್ಘ ಮಾತುಕತೆ ನಡೆಸಿ ಮೋದಿ ತಮ್ಮ ಮನೆಯಿಂದ ಹೋರಾಟ ನಂತರ, ಮೋದಿ ಮುಂದೊಂದು ದಿನ ದೇಶದ ಪ್ರಧಾನಿಯಾಗುತ್ತಾರೆ ಎಂದು ನನ್ನ ತಂದೆ ಅಭಿಪ್ರಾಯಪಟ್ಟಿದ್ದರು ಎಂದು ಅನಿಲ್ ಅಂಬಾನಿ ತಿಳಿಸಿದ್ದಾರೆ.
ತಮ್ಮ ಭವಿಷ್ಯವಾಣಿ ನಿಜವಾಗಿರುವುದನ್ನು ಕಂಡು ನನ್ನ ತಂದೆ ಸ್ವರ್ಗದಲ್ಲಿ ಸಂತಸಗೊಂಡಿರುತ್ತಾರೆ ಎಂದು ಅನಿಲ್ ಅಂಬಾನಿ ಹೇಳಿದ್ದಾರೆ. ನರೇಂದ್ರ ಮೋದಿ ಓರ್ವ ಅದ್ಭುತ ಕನಸುಗಾರ ಹಾಗು ಅರ್ಜುನನಂತೆ ಸ್ಪಷ್ಟತೆ ಹಾಗು ಉದ್ದೇಶ ಹೊಂದಿರುವ ವ್ಯಕ್ತಿ ಎಂದು ಧೀರುಭಾಯ್ ಅಂಬಾನಿ ಹೇಳಿದ್ದರು ಎಂದಿದ್ದಾರೆ ಅನಿಲ್ ಅಂಬಾನಿ.
Advertisement