ರಾಮ್ ಪಾಲ್ ಸಂಬಂಧಿಯನ್ನು ಪಕ್ಷದಿಂದ ಉಚ್ಚಾಟಿಸಿದ ಶಿವಪಾಲ್ ಯಾದವ್

ಸಮಾಜವಾದಿ ಪಕ್ಷದ ರಾಜಕೀಯ ಬಿಕ್ಕಟ್ಟು ಬಗೆಹರಿದ ಬೆನ್ನಲ್ಲೇ ಮುಲಾಯಂ ಸಿಂಗ್ ಯಾದವ್ ಸಹೋದರ ಹಾಗೂ ಎಸ್ಪಿ ಹಿರಿಯ ನಾಯಕ ಶಿವಪಾಲ್ ಯಾದವ್ ಮತ್ತೊಬ್ಬ ಎಸ್ಪಿ ಮುಖಂಡ ರಾಮ್ ಪಾಲ್ ಯಾದವ್ ಅವರ ಹತ್ತಿರದ ಸಂಬಂಧಿಯನ್ನು ...
ಶಿವಪಾಲ್ ಯಾದವ್
ಶಿವಪಾಲ್ ಯಾದವ್

ಲಕ್ನೋ: ಸಮಾಜವಾದಿ ಪಕ್ಷದ ರಾಜಕೀಯ ಬಿಕ್ಕಟ್ಟು ಬಗೆಹರಿದ ಬೆನ್ನಲ್ಲೇ ಮುಲಾಯಂ ಸಿಂಗ್ ಯಾದವ್ ಸಹೋದರ ಹಾಗೂ ಎಸ್ಪಿ ಹಿರಿಯ ನಾಯಕ ಶಿವಪಾಲ್ ಯಾದವ್ ಮತ್ತೊಬ್ಬ ಎಸ್ಪಿ ಮುಖಂಡ ರಾಮ್ ಪಾಲ್ ಯಾದವ್ ಅವರ ಹತ್ತಿರದ ಸಂಬಂಧಿಯನ್ನು ಪಕ್ಷದಿಂದ ಉಚ್ಚಾಟಿಸಿದ್ದಾರೆ.

ಭೂ ಕಬಳಿಕೆ ಆರೋಪದ ಮೇಲೆ ರಾಮ್ ಗೋಪಾಲ್ ಯಾದವ್ ಅಳಿಯ ಎಂಎಲ್ ಸಿ ಅರವಿಂದ್ ಪ್ರತಾಪ್ ಅವರನ್ನು ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಅಧ್ಯಕ್ಷ ಶಿವಪಾಲ್ ಯಾದವ್ ಉಚ್ಟಾಟಿಸುವುದರ ಮೂಲಕ ಸೇಡಿನ ರಾಜಕೀಯಕ್ಕೆ ಮುಂದಾಗಿದ್ದಾರೆ.

ರಾಮ್ ಗೋಪಾಲ್ ಯಾದವ್ ಸಂಬಂಧಿಗಳಾದ ಅರವಿಂದ್ ಪ್ರತಾಪ್ ಮತ್ತು ಅಖಿಲೇಶ್ ಕುಮಾರ್ ಯಾದವ್ ವಿರುದ್ದ ಹಲವು ಭೂ ಕಬಳಿಕೆ ಆರೋಪಗಳು ಕೇಳಿ ಬಂದಿದ್ದವು.
ಪಕ್ಷದ ಪರಮೋಚ್ಚ ನಾಯಕ ಮುಲಾಯಂ ಸಿಂಗ್ ಯಾದವ್ ವಿರುದ್ಧ ಅರವಿಂದ್ ಪ್ರತಾಪ್ ಅವಹೇಳನಕಾರಿಯಾಗಿ ಮಾತನಾಡಿದ್ದರು, ಜೊತೆಗೆ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು ಎಂಬ ಆರೋಪಗಳು ಕೇಳಿಬಂದಿವೆ.

ವಿಧಾನ ಸಭೆ ಚುನಾವಣೆ ಸಮೀಪಿಸುತ್ತಿದ್ದು, ಪ್ರತಿಯೊಬ್ಬ ಕಾರ್ಯಕರ್ತ ಪಕ್ಷದ ಬಲವರ್ಧನೆಗೆ ಶ್ರಮಿಸಿ, ಸಮಾಜವಾದಿ ಪಕ್ಷ ಬಹುಮತ ಪಡೆದು ಮತ್ತೆ ಸರ್ಕಾರ ರಚಿಸಲು ಕೆಲಸ ಮಾಡಬೇಕು ಎಂದು ಶಿವಪಾಲ್ ಯಾದವ್ ಕಾರ್ಯಕರ್ತರಿಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com