ಉರಿ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಲು ಸಮಯ, ಸ್ಥಳ ನಿರ್ಧಾರ: ಭಾರತೀಯ ಸೇನೆ

ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್ ಮೇಲೆ ನಡೆದ ಉಗ್ರ ದಾಳಿಗೆ ಪ್ರತ್ಯುತ್ತರ ನೀಡಲು ಸಮಯ ಮತ್ತು ಸ್ಥಳ ನಿರ್ಧರಿಸಲಾಗುವುದು...
ಉರಿ ಸೇನಾ ಕ್ಯಾಂಪ್ ಬಳಿ ಭದ್ರತಾ ಸಿಬ್ಬಂದಿ
ಉರಿ ಸೇನಾ ಕ್ಯಾಂಪ್ ಬಳಿ ಭದ್ರತಾ ಸಿಬ್ಬಂದಿ
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್ ಮೇಲೆ ನಡೆದ ಉಗ್ರ ದಾಳಿಗೆ ಪ್ರತ್ಯುತ್ತರ ನೀಡಲು ಸಮಯ ಮತ್ತು ಸ್ಥಳ ನಿರ್ಧರಿಸಲಾಗುವುದು ಎಂದು ಸೋಮವಾರ ಭಾರತೀಯ ಸೇನೆ ಹೇಳಿದೆ.
'ಉರಿ ದಾಳಿಗೆ ಪ್ರತ್ಯುತ್ತರ ನೀಡಲು ಸಮಯ ಮತ್ತು ಸ್ಥಳ ನಮ್ಮ ಆಯ್ಕೆಗೆ ಬಿಡಲಾಗಿದ್ದು, ಆ ಬಗ್ಗೆ ನಾವು ನಿರ್ಧರಿಸುತ್ತೇವೆ' ಎಂದು ಸೇನಾ ಕಾರ್ಯಾಚರಣೆಯ ಮಹಾ ನಿರ್ದೇಶಕ(ಡಿಜಿಎಂಒ) ಲೆ.ಜನರಲ್ ರಣಬಿರ್ ಸಿಂಗ್ ಅವರು ಹೇಳಿದ್ದಾರೆ.
ಆಕ್ರಮಣಶೀಲ ಮತ್ತು ಹಿಂಸಾತ್ಮಕ ಕೃತ್ಯಗಳಿಗೆ ತಕ್ಕ ಪ್ರತ್ಯುತ್ತರ ನೀಡುವ ಸಾಮರ್ಥವನ್ನು ನಾವು ಹೊಂದಿದ್ದೇವೆ ಎಂದಿರುವ ರಣಬಿರ್ ಸಿಂಗ್ ಅವರು, ಉಗ್ರರು ದಾಳಿ ನಡೆಸಿದ ಸ್ಥಳದಲ್ಲಿ ಪತ್ತೆಯಾದ ಭಾರಿ ಮೊತ್ತದ ಆಹಾರ ಮತ್ತು ಔಷದಿಯ ಪಾಕೇಟ್ ಗಳು ಪಾಕ್ ಗೆ ಸೇರಿದ್ದು ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಉರಿ ಕಾರ್ಯಾಚರಣೆಯಲ್ಲಿ ಸೇನೆ ಒಟ್ಟು ನಾಲ್ಕು ಎಕೆ ರೈಫಲ್ಸ್, 4 ಗ್ರೆನೇಡ್, 4 ಅಂಡರ್ ಬ್ಯಾರೆಲ್ ಗ್ರೆನೇಡ್, 5 ಹ್ಯಾಂಡ್ ಗ್ರೆನೇಡ್ ಹಾಗೂ ಎರಡು ರೆಡಿಯೇಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com