ಉರಿ ಉಗ್ರರ ದಾಳಿ: ದೇಶವನ್ನು ರಕ್ಷಿಸಲು ಪ್ರಾಣತೆತ್ತು ಹುತಾತ್ಮರಾದ ಯೋಧವರಿವರು

ಜಮ್ಮು ಕಾಶ್ಮೀರದ ಉರಿಯಲ್ಲಿ ಉಗ್ರರ ದಾಳಿಗೆ ಪ್ರಾಣ ತೆತ್ತು ದೇಶವನ್ನು ರಕ್ಷಿಸಿ ಹುತ್ಮಾತ್ಮರಾದ 18 ಯೋಧರ ಸಾವಿಗೆ ಇಡೀ ಭಾರತವೇ...
ಹುತಾತ್ಮ ಸೈನಿಕರು
ಹುತಾತ್ಮ ಸೈನಿಕರು

ದೆಹಲಿ:  ಜಮ್ಮು ಕಾಶ್ಮೀರದ ಉರಿಯಲ್ಲಿ ಉಗ್ರರ ದಾಳಿಗೆ ಪ್ರಾಣ ತೆತ್ತು ದೇಶವನ್ನು ರಕ್ಷಿಸಿ ಹುತ್ಮಾತ್ಮರಾದ 18 ಯೋಧರ ಸಾವಿಗೆ ಇಡೀ ಭಾರತವೇ ಅಶ್ರು ತರ್ಪಣ ಸಲ್ಲಿಸಿದೆ.

12 ಆರ್ಮಿ ಬ್ರಿಗೇಡ್​ ಸೇನಾ ಕಚೇರಿ ಆವರಣಕ್ಕೆ ನುಗ್ಗಿದ ಉಗ್ರರು ಬಾಂಬ್ ಸ್ಫೋಟಿಸಿದ್ದರು. ಗುಂಡಿನ ಚಕಮಕಿಯಲ್ಲಿ 17 ಯೋಧರು ಹುತಾತ್ಮರಾಗಿದ್ದರು. ಅಲ್ಲದೇ ಭಾರತೀಯ ಯೋಧರು ನಾಲ್ವರು ಉಗ್ರರನ್ನು ಹೊಡೆದುರುಳಿಸಿದ್ದರು.

ಗಾಯಗೊಂಡಿದ್ದ ಮತ್ತೊಬ್ಬ ಯೋಧ ಸೆಪೋಯ್  ಕೆ ವಿಕಾಸ್  ಜನಾರ್ದನ್ ದೆಹಲಿಯ ಆರ್ಮಿ ರಿಸೇರ್ಚ್ ಮತ್ತು ರೆಫರೆಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರು.

ಮೃತ ಯೋಧರಲ್ಲಿ ಇಬ್ಬರು ಜಮ್ಮು ಮತ್ತು ಕಾಶ್ಮೀರವರಾಗಿದ್ದಾರೆ. ಉಳಿದವರಲ್ಲಿ ಉತ್ತರ ಪ್ರದೇಶರ ನಾಲ್ಕು ಸೈನಿಕರು, ಬಿಹಾರದ ಮೂರು ಹಾಗೂ ಪಶ್ಚಿಮ ಬಂಗಾಳ ಇಬ್ಬರು, ಜಾರ್ಖಂಡ್ ಮತ್ತು ರಾಜಸ್ತಾನ ತಲಾ ಇಬ್ಬರು ಯೋಧರು ದಾಳಿಯಲ್ಲಿ ಹುತಾತ್ಮರಾಗಿದ್ದಾರೆ.

ಉರಿಯಲ್ಲಿ ನಡೆದ ಉಗ್ರರ ಮಾರಣಾಂತಿಕ ದಾಳಿಗೆ ಇಡೀ ಭಾರತವೇ ಆಕ್ರೋಶ ವ್ಯಕ್ತಪಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಉಗ್ರರ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ನೇರವಾಗಿ ಪಾಕಿಸ್ತಾನವನ್ನು ಹೊಣೆಯಾಗಿಸಿ ಪಾಕಿಸ್ತಾನ ಒಂದು ಉಗ್ರರ ರಾಜ್ಯ ಎಂದು ನಿಂದಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com