ಉರಿ ಉಗ್ರರ ದಾಳಿ: ಫೇಸ್ ಬುಕ್ ನಲ್ಲಿ ದೇಶವಿರೋಧಿ ಬರಹ ಹಾಕಿದ್ದ ಅಲಿಗಡ ವಿವಿ ವಿದ್ಯಾರ್ಥಿ ವಜಾ

ಜಮ್ಮು ಕಾಶ್ಮೀರದ ಉರಿ ಸೇನಾ ನೆಲೆ ಮೇಲೆ ನಡೆದ ಉಗ್ರರ ದಾಳಿ ಸಂಬಂಧ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಆಕ್ಷೇಪಾರ್ಹ ಬರಹ ಹಾಕಿದ್ದ ಅಲಿಗಡ ಮುಸ್ಲಿಂ ...
ಅಲಿಗ ಮುಸ್ಲಿಂ ವಿವಿ
ಅಲಿಗ ಮುಸ್ಲಿಂ ವಿವಿ
Updated on

ಆಗ್ರಾ: ಜಮ್ಮು ಕಾಶ್ಮೀರದ ಉರಿ ಸೇನಾ ನೆಲೆ ಮೇಲೆ ನಡೆದ ಉಗ್ರರ ದಾಳಿ ಸಂಬಂಧ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಆಕ್ಷೇಪಾರ್ಹ ಬರಹ ಹಾಕಿದ್ದ  ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಯನ್ನು ವಜಾ ಮಾಡಲಾಗಿದೆ.

ಫೇಸ್‌ಬುಕ್‌ನಲ್ಲಿ ಪ್ರಕಟವಾಗಿರುವ ಬರಹ ದೇಶವಿರೋಧಿ ಮತ್ತು  ಆಕ್ಷೇಪಾರ್ಹ  ಅಂಶಗಳಿಂದ ಕೂಡಿದ್ದು, ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಕುಲಪತಿ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಜಮೀರುದ್ದೀನ್ ಶಾ ಅವರು ತಿಳಿಸಿದ್ದಾರೆ.

ವಿದ್ಯಾರ್ಥಿಯು ಕಾಶ್ಮೀರದ ಶ್ರೀನಗರ ಮೂಲದವನು ಎಂದು ಗುರುತಿಸಲಾಗಿದೆ. ಉಗ್ರರನ್ನು ಪ್ರಶಂಸಿಸುವ ಈ ಬರಹವನ್ನು ವಿದ್ಯಾರ್ಥಿಯು ತನ್ನ ಸ್ನೇಹಿತರ ಜತೆ ಹಂಚಿಕೊಂಡಿದ್ದಾನೆ ಎನ್ನಲಾಗಿದೆ. ಬರಹ ಪ್ರಕಟಿಸಿದ ಕೆಲ ನಿಮಿಷಗಳಲ್ಲೇ ಭಾರಿ ಸಂಚಲನ ಸೃಷ್ಟಿಸಿತು. ಈ ಸಂಬಂಧ ಅಲಿಗಡ ಮುಸ್ಲಿಂ ವಿವಿ ಅಪರಾಧ ಪ್ರಕರಣವನ್ನು ದಾಖಲಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com