'ಲೋಕ ಕಲ್ಯಾಣ ಮಾರ್ಗ' ವಾಗಿ ಬದಲಾಯ್ತು ಪ್ರಧಾನಿ ನಿವಾಸವಿರುವ ರೇಸ್ ಕೋರ್ಸ್ ರಸ್ತೆ ಹೆಸರು

ಪ್ರಧಾನ ಮಂತ್ರಿ ನಿವಾಸವಿರುವ ದೆಹಲಿಯ ಲೂಟೆನ್ಸ್‌ನ ಪ್ರಸಿದ್ಧ ರೇಸ್‌ ಕೋರ್ಸ್‌ ರಸ್ತೆಗೆ ಲೋಕಕಲ್ಯಾಣ ಮಾರ್ಗ ಎಂದು ಹೆಸರು ಬದಲಾವಣೆಗೊಳ್ಳಲಿದೆ.
ರೇಸ್ ಕೋರ್ಸ್ ನಲ್ಲಿರುವ ಪ್ರಧಾನಿ ಮೋದಿ
ರೇಸ್ ಕೋರ್ಸ್ ನಲ್ಲಿರುವ ಪ್ರಧಾನಿ ಮೋದಿ
Updated on

ನವದೆಹಲಿ: ಪ್ರಧಾನ ಮಂತ್ರಿ ನಿವಾಸವಿರುವ ದೆಹಲಿಯ ಲೂಟೆನ್ಸ್‌ನ ಪ್ರಸಿದ್ಧ ರೇಸ್‌ ಕೋರ್ಸ್‌ ರಸ್ತೆಗೆ ಲೋಕಕಲ್ಯಾಣ ಮಾರ್ಗ ಎಂದು ಹೆಸರು ಬದಲಾವಣೆಗೊಳ್ಳಲಿದೆ.

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ನವದೆಹಲಿ ನಗರಸಭೆ ಸಮಿತಿಯ (ಎನ್‌ಡಿಎಂಸಿ) ಉನ್ನತ ಮಟ್ಟದ ಸಭೆಯಲ್ಲಿ ಮರುನಾಮಕರಣ ಮಾಡುವ ನಿರ್ಧಾರ ಕೈಗೊಂಡಿದ್ದು ಸದ್ಯದಲ್ಲೇ ಅಧಿಸೂಚನೆ ಹೊರಬೀಳಲಿದೆ.

ದೀನ್‌ದಯಾಳ್ ಉಪಾಧ್ಯ ಅವರ ಸಿದ್ಧಾಂತ ಉಲ್ಲೇಖಿಸಿ ರೇಸ್‌ಕೋರ್ಸ್ ರಸ್ತೆಗೆ ‘ಏಕಾತ್ಮ ಮಾರ್ಗ’ ಎಂದು ಹೆಸರಿಡುವಂತೆ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಅವರು ಪ್ರಸ್ತಾಪಿಸಿದರು. ಇದೇ ರಸ್ತೆಗೆ ಸಿಖ್ಖರ 10ನೇ ಧರ್ಮಗುರು ಗುರುಗೋವಿಂದ ಸಿಂಗ್ ಅವರ ಹೆಸರಿಡುವಂತೆ ಮುಖ್ಯಮಂತ್ರಿ ಕೇಜ್ರಿವಾಲ್ ಅವರು ಪ್ರಸ್ತಾಪಿಸಿದರು. ಆದರೆ ಸಭೆಯಲ್ಲಿ ಸಮ್ಮತಿ ಸಿಗಲಿಲ್ಲ.

ರೇಸ್‌ಕೋರ್ಸ್‌ ರಸ್ತೆ ಮರು ನಾಮಕರಣ ಬಗ್ಗೆ ಪ್ರಧಾನಿಯನ್ನು ಸಂಪರ್ಕಿಸಲು ಸಲಹೆ ನೀಡಿದೆ. ಆದರೆ ಸಾರ್ವಜನಿಕರಿಂದ ಬಂದ ಸಲಹೆಗಳನ್ನು ಆಧರಿಸಿ ಸಮಿತಿ ಸದಸ್ಯರು ‘ಲೋಕಕಲ್ಯಾಣ ಮಾರ್ಗ’ ಎಂದು ಬದಲಿಸಲು ನಿರ್ಧರಿಸಿದರು ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.  

ಒಮ್ಮೆ ಅಧಿಸೂಚನೆಯು ಜಾರಿಯಾದರೆ, ಪ್ರಧಾನಿಯ ಅಧಿಕೃತ ನಿವಾಸದ ವಿಳಾಸ: 7, ಲೋಕಕಲ್ಯಾಣ ಮಾರ್ಗ, ನವದೆಹಲಿ ಎಂದು ಬದಲಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com