ಅಮನತುಲ್ಲಾ ಖಾನ್
ದೇಶ
ಲೈಂಗಿಕ ಕಿರುಕುಳ ಪ್ರಕರಣ: ಆಪ್ ಶಾಸಕ ಅಮನತುಲ್ಲಾ ಖಾನ್ ಗೆ ಜಾಮೀನು
ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಎಎಪಿ ಶಾಸಕ ಅಮನತುಲ್ಲಾ ಖಾನ್...
ನವದೆಹಲಿ: ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಎಎಪಿ ಶಾಸಕ ಅಮನತುಲ್ಲಾ ಖಾನ್ ಅವರಿಗೆ ಗುರುವಾರ ದೆಹಲಿ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಜಾಮೀನು ಕೋರಿ ಆಪ್ ಶಾಸಕ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮೆಟ್ರೋಪೊಲಿಟನ್ ಮ್ಯಾಜಿಸ್ಟ್ರೇಟ್ ವಿಜೇತ ಸಿಂಗ್ ಅವರು, 35 ಸಾವಿರ ರುಪಾಯಿಯ ವೈಯಕ್ತಿಕ ಬಾಂಡ್ ಹಾಗೂ ದೂರುದಾರರಿಗೆ ಬೆದರಿಕೆ ಅಥವಾ ಒತ್ತಡ ಹಾಕದಂತೆ ಷರತ್ತು ವಿಧಿಸಿ ಜಾಮೀನು ನೀಡಿದ್ದಾರೆ.
ಸ್ವತಃ ಅಮನತುಲ್ಲಾ ಖಾನ್ ಸೊಸೆಯೇ ಅವರ ವಿರುದ್ಧ ಲೈಂಗಿಕ ಕಿರುಕುಳದ ದೂರು ನೀಡಿದ್ದರು. ಈ ಸಂಬಂಧ ನಿನ್ನೆ ವಿಚಾರಣೆಗೆಂದು ತೆರಳಿದ್ದ ಆಪ್ ಶಾಸಕನನ್ನು ವಶಕ್ಕೆ ಪಡೆದಿದ್ದ ದೆಹಲಿ ಪೊಲೀಸರು ಆರೋಪಿಯನ್ನು ಕೋರ್ಟ್ ಗೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ್ದ ಕೋರ್ಟ್ ಒಂದು ದಿನದ ಮಟ್ಟಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.
ಅಮನತುಲ್ಲಾ ಖಾನ್ ಇದು ಎರಡನೇ ಬಾರಿ ಜೈಲು ಪಾಲಾಗಿದ್ದಾರೆ. ಈ ಮುಂಚೆ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಖಾನ್, ಸೆಪ್ಟೆಂಬರ್ 18ರಂದು ಜಾಮೀನಿನ ಮೇಲೆ ಬಿಡುಗಡೆ ಯಾಗಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ