
ಸೂರತ್: ಜಮ್ಮು ಕಾಶ್ಮೀರದ ಉರಿಯಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸೈನಿಕರಿಗೆ ಇಡೀ ದೇಶವೇ ಸಂತಾಪ ಸೂಚಿಸಿದೆ. ಈ ನಡುವೆ ಗುಜರಾತ್ ಉದ್ಯಮಿ ಯೊಬ್ಬರು ಉರಿ ಉಗ್ರರ ದಾಳಿಯಲ್ಲಿ ಮೃತಪಟ್ಟ ಯೋಧರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡಲು ಮುಂದಾಗಿದ್ದಾರೆ.
ಪಿಪಿ ಸವಾನಿ ಗ್ರೂಪ್ ನ ಮಹೇಶ್ ಸವಾನಿ, ಹುತಾತ್ಮ ಯೋಧರ ಮಕ್ಕಳಿಗೆ ಪದವಿವರೆಗೂ ತಗಲುವ ಶಿಕ್ಷಣದ ವೆಚೇಚ ಭರಿಸಲು ನಿರ್ಧರಿಸಿದ್ದಾರೆ. ಜೊತೆಗೆ ಹುತಾತ್ಮ ಯೋಧರ ಹೆಣ್ಣು ಮಕ್ಕಳ ಮದುವೆ ಜಾವಾಬ್ದಾರಿಯನ್ನು ಸಹ ತೆಗೆದುಕೊಂಡಿದ್ದಾರೆ.
ಹುತಾತ್ಮ ಯೋಧರ ಪುತ್ರಿಯೊರ್ವಳು ದುಃಖದಿಂದ ತನ್ನ ನೋವು ತೋಡಿಕೊಳ್ಳುತ್ತಿದ್ದುದ್ದನ್ನು ಟಿವಿಯಲ್ಲಿ ನೋಡಿದ ಮೇಲೆ ನಾನು ತುಂಬಾ ಬಾವುಕನಾಗಿಬಿಟ್ಟೆ, ಹೀಗಾಗಿ ಹುತಾತ್ಮ ಯೋಧರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡಲು ನಿರ್ಧರಿಸಿದ್ದಾಗಿ ತಿಳಿಸಿದ್ದರು.
ಇನ್ನು ಸರ್ಕಾರದಿಂದ ಮೃತ ಯೋಧರ ಹೆಣ್ಣು ಮಕ್ಕಳ ಬಗ್ಗೆ ಮಾಹಿತಿ ಪಡೆದುಕೊಂಡು ಅವರ ವಿವಾಹದ ವೆಚ್ಚವನ್ನು ಭರಿಸುವುದಾಗಿು ಅವರು ಹೇಳಿದ್ದಾರೆ.
ಇನ್ನೂ ಗುಜರಾತ್ ನ ವೈದ್ಯರ ಸಂಘ, ರೋಟರಿ ಕ್ಲಬಲ್ ಲಯೆನೆಸ್ ಕ್ಲಬ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಹುತಾತ್ಮ ಯೋಧರ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಲು ಮುಂದಾಗಿವೆ.
Advertisement