ಮೋಗಾ: ಪಂಜಾಬ್ ನ ಆಡಳಿತರೂಢ ಅಕಾಲಿ ದಳಕ್ಕೆ ಮುಜುಗರ ಉಂಟು ಮಾಡುವಂತಹ ಘಟನೆಯೊಂದು ನಡೆದಿದೆ. ಆಸ್ಪತ್ರೆಯೊಂದರಲ್ಲಿ ಸರದಿಯಲ್ಲಿ ಕಾಯುವಂತೆ ಹೇಳಿದ ಗರ್ಭಿಣಿ ನರ್ಸ್ ಗೆ ಅಕಾಲಿ ದಳದ ನಾಯಕ ಹಾಗೂ ಆತನ ಪುತ್ರ ಕಪಾಳಮೋಕ್ಷ ಮಾಡಿ, ಆಕೆಯ ಮೇಲೆ ಹಲ್ಲೆಗೈದ ಅಮಾನುಷ ಘಟನೆ ವಿಡಿಯೋದಲ್ಲಿ ಸೆರೆಯಾಗಿದ್ದು, ಅದೀಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.