ಪಾಕಿಸ್ತಾನಕ್ಕೆ ಆತ್ಮಹತ್ಯಾ ದಾಳಿಕೋರರನ್ನು ಕಳಿಸಿ: ಎಂಎನ್ ಎಸ್ ಗೆ ಸಮಾಜವಾದಿ ಪಕ್ಷದ ಸವಾಲು

ಕಾಶ್ಮೀರದ ಉರಿ ದಾಳಿ ಹಿನ್ನೆಲೆಯಲ್ಲಿ ಭಾರತದಲ್ಲಿರುವ ಪಾಕಿಸ್ತಾನಿ ಕಲಾವಿದರಿಗೆ ಭಾರತ ಬಿಟ್ಟು ಹೋರಾಡಲು ಗಡುವು ವಿಧಿಸಿದ್ದ ಎಂಎನ್ ಎಸ್ ಕ್ರಮಕ್ಕೆ ಸಮಾಜವಾದಿ ಪಕ್ಷ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ
ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ

ಮುಂಬೈ: ಕಾಶ್ಮೀರದ ಉರಿ ದಾಳಿ ಹಿನ್ನೆಲೆಯಲ್ಲಿ ಭಾರತದಲ್ಲಿರುವ ಪಾಕಿಸ್ತಾನಿ ಕಲಾವಿದರಿಗೆ ಭಾರತ ಬಿಟ್ಟು ಹೋರಾಡಲು ಗಡುವು ವಿಧಿಸಿದ್ದ ಎಂಎನ್ ಎಸ್ ಕ್ರಮಕ್ಕೆ ಸಮಾಜವಾದಿ ಪಕ್ಷ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಪಾಕ್ ಕಲಾವಿದರಿಗೆ ದೇಶ ಬಿಟ್ಟು ಹೋಗುವಂತೆ ಸೂಚಿಸಿದ್ದ ಮಹಾರಾಷ್ಟ್ರ ನವನಿರ್ಮಾಣ ಸೇನೆ( ಎಂಎನ್ಎಸ್) ಗೆ ಸವಾಲು ಹಾಕಿರುವ ಸಮಾಜವಾದಿ ಪಕ್ಷದ ಮುಖಂಡ ಅಬು ಅಜ್ಮಿ, ಧೈರ್ಯವಿದ್ದರೆ ಎಂಎನ್ ಎಸ್ ಪಾಕಿಸ್ತಾನಕ್ಕೆ ಆತ್ಮಹತ್ಯಾ ದಾಳಿ ನಡೆಸುವವರನ್ನು ಕಳಿಸಿ ಪಾಕಿಸ್ತಾನದ ವಿರುದ್ಧ ಸೇಡು ತೀರಿಸಿಕೊಳ್ಳಲಿ ಎಂದು ಸವಾಲು ಹಾಕಿದ್ದಾರೆ.

ಮಹಾರಾಷ್ಟ್ರ ನವನಿರ್ಮಾಣ ಸೇನೆಗೆ ಧೈರ್ಯವಿದ್ದರೆ ಲಾಹೋರ್ ಹಾಗೂ ಕರಾಚಿಗೆ ಆತ್ಮಹತ್ಯಾ ದಾಳಿಕೋರರನ್ನು ಕಳಿಸಿ ಪಾಕಿಸ್ತಾನದ ವಿರುದ್ಧ ಹೋರಾಡಲಿ ಅಥವಾ ಪಾಕಿಸ್ತಾನಿ ಕಲಾವಿದರಿಗೆ ಬೆದರಿಕೆ ಹಾಕುವುದನ್ನು ನಿಲ್ಲಿಸಲಿ ಎಂದು ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ನಕ್ಸಲ್ ಸಮಸ್ಯೆ ಹೆಚ್ಚುತ್ತಿದೆ. ಅದನ್ನು ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ಇನ್ನು ಪಾಕಿಸ್ತಾನದ ಬಗ್ಗೆ ಎಂಎನ್ ಎಸ್ ಮಾತನಾಡುತ್ತಿದೆ ಎಂದು ಸಮಾಜವಾದಿ ಪಕ್ಷ ಎಂಎನ್ ಎಸ್ ಕ್ರಮವನ್ನು ಖಂಡಿಸಿದೆ. ಉರಿಯಲ್ಲಿರುವ ಸೇನಾ ಕಚೇರಿ ಮೇಲೆ ಪಾಕಿಸ್ತಾನದ ಭಯೋತ್ಪಾದಕರು ದಾಳಿ ನಡೆಸಿದ್ದ ಹಿನ್ನೆಲೆಯಲ್ಲಿ ಎಂಎನ್ಎಸ್ ಭಾರತದಲ್ಲಿರುವ ಪಾಕಿಸ್ತಾನಿ ಕಲಾವಿದರಿಗೆ ದೇಶ ಬಿಡಲು ಸೂಚಿಸಿ 48 ಗಂಟೆಗಳ ಗಡುವು ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com