ಬಿಕೆ ಬನ್ಸಾಲ್
ದೇಶ
ಭ್ರಷ್ಟಾಚಾರ ಆರೋಪ: ಮಗನೊಂದಿಗೆ ನೇಣಿಗೆ ಶರಣಾದ ಮಾಜಿ ನಿರ್ದೇಶಕ ಬಿಕೆ ಬನ್ಸಾಲ್
ಭ್ರಷ್ಟಾಚಾರದ ಆರೋಪಕ್ಕೆ ಗುರಿಯಾಗಿದ್ದ ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯದ ಮಾಜಿ ಮಹಾನಿರ್ದೇಶಕ ಬಿಕೆ ಬನ್ಸಾಲ್ ಅವರು ತಮ್ಮ ಪುತ್ರನೊಂದಿಗೆ
ನವದೆಹಲಿ: ಭ್ರಷ್ಟಾಚಾರದ ಆರೋಪಕ್ಕೆ ಗುರಿಯಾಗಿದ್ದ ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯದ ಮಾಜಿ ಮಹಾನಿರ್ದೇಶಕ ಬಿಕೆ ಬನ್ಸಾಲ್ ಅವರು ತಮ್ಮ ಪುತ್ರನೊಂದಿಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪ್ರಕರಣ ಸಂಬಂಧ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಬನ್ಸಾಲ್ ಅವರು ಡೇಟ್ ನೋಟ್ ಬರೆದಿಟ್ಟು ದೆಹಲಿಯ ಮಧು ವಿಹಾರ್ ನಗರದಲ್ಲಿರುವ ನೀಲ್ ಕಂಠ ಅಪಾರ್ಟ್ ಮೆಂಟ್ ನ ತಮ್ಮ ಮನೆಯಲ್ಲಿ ಮಗನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯದ ನಿರ್ದೇಶಕರಾಗಿದ್ದ ಬಿಕೆ ಬನ್ಸಾಲ್ ಅವರ ವಿರುದ್ಧ ಭ್ರಷ್ಟಾಚಾರದ ಆರೋಪವಿತ್ತು. ಕಂಪನಿಯೊಂದರಿಂದ 9 ಲಕ್ಷ ರುಪಾಯಿ ಲಂಚ ಪಡೆದಿದ್ದಾರೆ ಎಂಬ ಆರೋಪದ ಮೇಲೆ ಜುಲೈ 16ರಂದು ಅವರನ್ನು ಬಂಧಿಸಲಾಗಿತ್ತು.
ಬನ್ಸಾಲ್ ಅವರು ಡೇಟ್ ನೋಟ್ ನಲ್ಲಿ ಸಿಬಿಐ ದಾಳಿಯಿಂದ ಆಗಿರುವ ಅವಮಾನವನ್ನು ಸಹಿಸಲು ಸಾಧ್ಯವಾಗದೆ ತಾವು ಆತ್ಮಹತ್ಯೆಗೆ ಶರಣಾಗುತ್ತಿರುವುದಾಗಿ ಬರೆದಿದ್ದಾರೆ. ಸುದ್ದಿ ತಿಳಿದ ಕೂಡಲೇ ಅಪಾರ್ಟ್ ಮೆಂಟ್ ಗೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಬನ್ಸಾಲ್ ಬಂಧನವಾಗಿದ್ದರಿಂದ ಮನನೊಂದು ಬನ್ಸಾಲ್ ಪತ್ನಿ ಸತ್ಯಾಬಾಲ ಮತ್ತು ಮಗಳು ನೇಹಾ ಅವರು ಇದೇ ಅಪಾರ್ಟ್ ಮೆಂಟ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ