ರಯೀಸ್, ಎ ದಿಲ್ ಹೈ ಮುಷ್ಕಿಲ್ ಚಿತ್ರದಲ್ಲಿ ನಟಿಸಿರುವ ಪಾಕ್ ಕಲಾವಿದರ ಬದಲಾವಣೆಗೆ ಎಂಎಂಎಸ್ ಆಗ್ರಹ

ಮಹಾರಾಷ್ಟ್ರ ನವನಿರ್ಮಾಣ ಸೇನೆ(ಎಂಎನ್ಎಸ್) ಈಗ ರಯೀಸ್, ಎ ದಿಲ್ ಹೈ ಮುಷ್ಕಿಲ್ ಚಿತ್ರದಲ್ಲಿ ನಟಿಸಿರುವ ಪಾಕಿಸ್ತಾನ ಕಲಾವಿದರನ್ನು ಬದಲಾವಣೆ ಮಾಡಬೇಕು ಎಂದು ಒತ್ತಾಯಾಯಿಸಿದೆ.
ಎಂಎನ್ಎಸ್
ಎಂಎನ್ಎಸ್

ಮುಂಬೈ: ಕಾಶ್ಮೀರದಲ್ಲಿ ನಡೆದ ಪಾಕ್ ಭಯೋತ್ಪಾದಕರ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನಿ ಕಲಾವಿದರು 48 ಗಂಟೆಗಳಲ್ಲಿ ದೇಶ ಬಿಡಬೇಕೆಂದು ಒತ್ತಾಯಿಸಿದ್ದ  ಮಹಾರಾಷ್ಟ್ರ ನವನಿರ್ಮಾಣ ಸೇನೆ(ಎಂಎನ್ಎಸ್) ಈಗ ರಯೀಸ್, ಎ ದಿಲ್ ಹೈ ಮುಷ್ಕಿಲ್ ಚಿತ್ರದಲ್ಲಿ ನಟಿಸಿರುವ ಪಾಕಿಸ್ತಾನ ಕಲಾವಿದರನ್ನು ಬದಲಾವಣೆ ಮಾಡಬೇಕು ಎಂದು ಒತ್ತಾಯಾಯಿಸಿದೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಅಮೇಯ್ ಖೋಪ್ಕಾರ್, ಪಾಕಿಸ್ತಾನ ನಮ್ಮ ಮೇಲೆ ದಾಳಿ ನಡೆಸುವುದನ್ನು ಬಿಟ್ಟ ದಿನದಿಂದ ನಾವು ಪಾಕ್ ಗೆ ಸ್ನೇಹ ಹಸ್ತ ಚಾಚುತ್ತೇನೆ, ನಮಗೆ ಕಲೆಯ ಬಗ್ಗೆ ವಿರೋಧವಿಲ್ಲ. ಆದರೆ ಭಾರತದಲ್ಲಿರಿಯುವ ಪಾಕಿಸ್ತಾನದ ಕಲಾವಿದರು ಉರಿ ದಾಳಿಯ ಬಗ್ಗೆ ಮೌನ ವಹಿಸಿದ್ದರು ಎಂದು ಎಂಎನ್ ಎಸ್ ನ ಅಮೇಯ್ ಖೋಪ್ಕಾರ್ ಹೇಳಿದ್ದಾರೆ. 
ಪಾಕಿಸ್ತಾನದ ಕಲಾವಿದರಿಗೆ ದೇಶ ಬಿಟ್ಟು ಹೋಗುವಂತೆ 48 ಗಂಟೆಗಳ ಗಡುವು ನೀಡಿದ್ದೇವೆ. ಒಂದು ವೇಳೆ ಗಡುವು ನೀಡಿದ್ದರ ಹೊರತಾಗಿಯೂ ಸಹ ಯಾರಾದರೂ ಇಲ್ಲೇ ಉಳಿದರೆ ಅವರನ್ನು ಬಿಡುವುದಿಲ್ಲ ಎಂದು ಎಂಎನ್ ಎಸ್ ಎಚ್ಚರಿಕೆ ನೀಡಿದೆ. ಇನ್ನು ಪಾಕಿಸ್ತಾನ ಕಲಾವಿದರ ಪರವಾಗಿ ಮಾತನಾಡಿದ್ದ ಎ ದಿಲ್ ಹೈ ಮುಷ್ಕಿಲ್ ಚಿತ್ರದ ನಿರ್ದೇಶಕ ಕರಣ್ ಜೋಹರ್ ನಿವಾಸದ ಎದುರು ಎಂಎನ್ ಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ರಯೀಸ್, ಎ ದಿಲ್ ಹೈ ಮುಷ್ಕಿಲ್ ಚಿತ್ರದಲ್ಲಿ ನಟಿಸಿರುವ ಪಾಕ್ ಕಲಾವಿದರ ಬದಲಾವಣೆ ಮಾಡಬೇಕೆಂದು ಆಗ್ರಹಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com