ಅನುದಾನ ನೀಡುವುದರಿಂದ ಮಾತ್ರ ಸ್ವಚ್ಛ ಭಾರತವಾಗಲು ಸಾಧ್ಯವಿಲ್ಲ: ಮೋದಿ

ವಸಾಹತುಶಾಹಿ ಆಳ್ವಿಕೆಯ ವಿರುದ್ಧದ ಮಹಾತ್ಮ ಗಾಂಧಿಯವರ ಸತ್ಯಾಗ್ರಹದಿಂದ ಪ್ರೇರಣೆ ಪಡೆದು ಸ್ವಚ್ಛಾಗ್ರಹ ಚಳುವಳಿ...
ಪ್ರಧಾನಿಯಿಂದ ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ (ಸಂಗ್ರಹ ಚಿತ್ರ)
ಪ್ರಧಾನಿಯಿಂದ ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ (ಸಂಗ್ರಹ ಚಿತ್ರ)
Updated on: 
ನವದೆಹಲಿ: ವಸಾಹತುಶಾಹಿ ಆಳ್ವಿಕೆಯ ವಿರುದ್ಧದ ಮಹಾತ್ಮ ಗಾಂಧಿಯವರ ಸತ್ಯಾಗ್ರಹದಿಂದ ಪ್ರೇರಣೆ ಪಡೆದು ಸ್ವಚ್ಛಾಗ್ರಹ ಚಳುವಳಿ ಆರಂಭಿಸಲಾಗಿದೆ. ಆದರೆ  ಅನದಾನ ನೀಡುವುದರಿಂದ ಮಾತ್ರ ಭಾರತ ಸ್ವಚ್ಛವಾಗಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಹೇಳಿದ್ದಾರೆ.
ರಸ್ತೆಯ ಮೇಲಿನ ಕಸದ ಚಿತ್ರಗಳನ್ನು ತೋರಿಸುವ ಮೂಲಕ ಸ್ವಚ್ಛ ಭಾರತ ಅಭಿಯಾನ ವಿಫಲವಾಗಿದೆ ಎಂದು ಆರೋಪಿಸುವವರಿಗೆ ತಿರುಗೇಟಿ ನೀಡಿದ ಪ್ರಧಾನಿ, ಈ ಅಭಿಯಾನದಿಂದ ಸ್ಪಚ್ಛತೆ ಬಗ್ಗೆ ಕನಿಷ್ಠ ತಿಳುವಳಿಕೆಯಾದರು ಬಂದಿದೆ ಎಂದರು,
ಸ್ವಚ್ಛ ಭಾರತ ಅಭಿಯಾನ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇಂದು ನಡೆದ ಭಾರತೀಯ ನೈರ್ಮಲ್ಯ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ, ಜನ ಗಾರ್ಬೇಜ್ ಅನ್ನು ಇಷ್ಟ ಪಡುವುದಿಲ್ಲ. ಆದರೆ ಇನ್ನು ಸ್ಪಚ್ಛತೆಯ ಅಭ್ಯಾಸ ಮಾಡಿಕೊಳ್ಳುತ್ತಿಲ್ಲ ಎಂದರು.
ರಾಜಕಾರಣಿಗಳಿಗೆ ಸ್ವಚ್ಛತೆ ವಿಷಯ ಅಷ್ಟು ಸುಲಭವಲ್ಲ. ಪ್ರತಿ ಎರಡು ವರ್ಷಕ್ಕೊಮ್ಮೆ ದೇಶದ ಯಾವುದಾದರೊಂದು ಮೂಲೆಯಲ್ಲಿ ಚುನಾವಣೆ ನಡೆಯುತ್ತಿರುತ್ತದೆ. ಹೀಗಾಗಿ ಅವರು ಕೇವಲ ಮುಂದಿನ ಚುನಾವಣೆಗಾಗಿ ಮಾತ್ರ ಕೆಲಸ ಮಾಡುತ್ತಾರೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com