
ಗಯಾ: ಭಾರತೀಯ ಸೇನೆ ಯೋಧರು ಪಾಕಿಸ್ತಾನದೊಳಗೆ ನುಗ್ಗಿ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಮುಖ್ಯಸ್ಥ ಉಗ್ರ ಹಪೀಜ್ ಸಯೀದ್ ನ್ನು ಶೀಘ್ರವೇ ಹತ್ಯೆ ಮಾಡಬೇಕು ಎಂದು ಉರಿ ಉಗ್ರ ದಾಳಿಯಲ್ಲಿ ಹುತಾತ್ಮರಾದ ಯೋಧ ಹವಾಲ್ದಾರ್ ಅಶೋಕ್ ಕುಮಾರ್ ಅವರ ಪತ್ನಿ ಸಂಗೀತಾ ದೇವಿ ಒತ್ತಾಯಿಸಿದ್ದಾರೆ.
9/11 ರ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದ ಒಸಾಮಾ ಬಿನ್ ಲಂಡನ್ ನ್ನು ಅಮೆರಿಕ ಸೇನಾ ಪಡೆಗಳು ಹತ್ಯೆ ಮಾಡಿದಂತೆಯೇ, ಹಪೀಜ್ ಸಯೀದ್ ನನ್ನೂ ಭಾರತೀಯ ಯೋಧರು ಹತ್ಯೆ ಮಾಡಬೇಕು ಎಂದು ಸಂಗೀತಾ ದೇವಿ ಕರೆ ನೀಡಿದ್ದಾರೆ.
ಭಾರತೀಯ ಸೇನೆ ಪಾಕ್ ಆಕ್ರಮಿತ ಪ್ರದೇಶದಲ್ಲಿ ನಡೆಸಿರುವ ಸೀಮಿತ ದಾಳಿಯನ್ನು ಹುತಾತ್ಮ ಯೋಧ ಅಶೋಕ್ ಕುಮಾರ್ ಅವರ ಪತ್ನಿ ಸಂಗೀತ ದೇವಿ ಶ್ಲಾಘಿಸಿದ್ದು, ಸೇನಾಪಡೆಯ ಕ್ರಮ ತಮಗೆ ಸಂತೋಷವಾಗಿದೆ ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಎಲ್ಲಾ ಭಯೋತ್ಪಾದಕ ಕ್ಯಾಂಪ್ ಗಳ ಮೇಲೆ ದಾಳಿ ನಡೆಸಲು ಆದೇಶ ನೀಡಬೇಕು ಎಂದು ಸಂಗೀತಾ ದೇವಿ ಆಗ್ರಹಿಸಿದ್ದಾರೆ.
Advertisement