ಹಿಂದುತ್ವ ಮತಕ್ಕಾಗಿ ಬಿಜೆಪಿ ಗೋ ಸಂರಕ್ಷಣಾ ಅಸ್ತ್ರವನ್ನು ಬಳಸುತ್ತಿದೆ: ಸಿಪಿಐ(ಎಂ)

ಭಾರತೀಯ ಜನತಾ ಪಕ್ಷ(ಬಿಜೆಪಿ) ಹಿಂದುಕ್ವ ಮತಕ್ಕಾಗಿ ಗೋ ಸಂರಕ್ಷಣೆ ಅಸ್ತ್ರವನ್ನು ಬಳಸಿಕೊಳ್ಳುತ್ತಿದೆ ಎಂದು ಸಿಪಿಐ(ಎಂ) ಆರೋಪಿಸಿದೆ...
ಗೋ ಸಂರಕ್ಷಣಾ
ಗೋ ಸಂರಕ್ಷಣಾ
Updated on: 
ನವದೆಹಲಿ: ಭಾರತೀಯ ಜನತಾ ಪಕ್ಷ(ಬಿಜೆಪಿ) ಹಿಂದುಕ್ವ ಮತಕ್ಕಾಗಿ ಗೋ ಸಂರಕ್ಷಣೆ ಅಸ್ತ್ರವನ್ನು ಬಳಸಿಕೊಳ್ಳುತ್ತಿದೆ ಎಂದು ಸಿಪಿಐ(ಎಂ) ಆರೋಪಿಸಿದೆ. 
ಬಿಜೆಪಿ ತನ್ನ ಮತಕ್ಕಾಗಿ ಹಳೆಯ ಗೋ ಸಂರಕ್ಷಣಾ ಅಸ್ತ್ರವನ್ನು ಬಳಸಿಕೊಳ್ಳುತ್ತಿದೆ. ಇದರೊಂದಿಗೆ ಕೋಮು ಧ್ರುವೀಕರಣ ಮಾಡುತ್ತಿದೆ. ಗೋ ಸಂರಕ್ಷಣೆಯಿಂದ ಮುಸ್ಲಿಂ ಮತ್ತು ದಲಿತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾ ರಾಂ ಯಚೂರಿ ಹೇಳಿದ್ದಾರೆ. 
ದೇಶದಲ್ಲಿ ಸಾಮರಸ್ಯವನ್ನು ಕದಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಕೆಲ ಭಾಗಗಳಲ್ಲಿ ಬಿಜೆಪಿ ಗೋ ಹತ್ಯೆಯನ್ನು ನಿಷೇಧಿಸಿದೆ. ಆದರೆ ಕೇರಳ, ಈಶಾನ್ಯ, ಛತ್ತೀಸ್ಗಡ್ ಗಳಲ್ಲಿ ಗೋಹತ್ಯೆಯನ್ನು ನಿಷೇಧಿಸುವುದಿಲ್ಲ ಎಂದು ಹೇಳುತ್ತಿದೆ. ಇದರೊಂದಿಗೆ ದೇಶದಲ್ಲಿ ಕೋಮು ಸಾಮರಸ್ಯವನ್ನು ಕದಡುತ್ತಿದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com