ನವದೆಹಲಿ: ಸಮಾಜವಾದಿ ಪಕ್ಷದ ಮಾಜಿ ವಕ್ತಾರ ಗೌರವ್ ಭಾಟಿಯಾ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ತೊರೆದು ಚುನಾವಣೆಗೆ ಸ್ಪರ್ಧಿಸಿದ್ದ ಗೌರವ್ ಭಾಟಿಯಾ, ಅಮಿತ್ ಶಾ ಹಾಗೂ ನರೇಂದ್ರ ಮೋದಿ ಅವರಿಂದ ಆಕರ್ಷಿತಗೊಂಡು ಬಿಜೆಪಿ ಸೇರ್ಪಡೆಗೊಂಡಿರುವುದಾಗಿ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ನ ನ್ಯಾಯವಾದಿಯಾಗಿರುವ ಗೌರವ್ ಭಾಟಿಯಾ, ಸಮಾಜವಾದಿ ಪಕ್ಷ ರಾಮ್ ಮನೋಹರ್ ಲೋಹಿಯಾ ಅವರ ಸಿದ್ಧಾಂತಗಳಿಂದ ದೂರ ಬಂದಿದೆ, ಸಮಾಜವಾದಿ ಪಕ್ಷದಲ್ಲಿ ನಿಷ್ಠರಿಗೆ ಬೆಲೆ ಇಲ್ಲ. ಅದು ಕೇವಲ ವಂಶ ಪಾರಂಪರ್ಯ ರಾಜಕಾರಣ ನಡೆಯುತ್ತಿದೆ ಎಂದು ಗೌರವ್ ಭಾಟಿಯಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಫೆ.5 ರಂದು ಗೌರವ್ ಭಾಟಿಯಾ ಸಮಾಜವಾದಿ ಪಕ್ಷದ ವಕ್ತಾರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭುಪೇಂದ್ರ ಯಾದವ್ ಅವರ ನೇತೃತ್ವದಲ್ಲಿ ಗೌರವ್ ಭಾಟಿಯಾ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.