ಫೋನಿನಲ್ಲಿ ತ್ರಿವಳಿ ತಲಾಖ್: ಸಿಎಂ ಯೋಗಿ ಮೊರೆ ಹೋದ ಮುಸ್ಲಿಂ ಮಹಿಳೆ

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ನಡೆಸುತ್ತಿದ್ದ ಜನತಾ ದರ್ಬಾರ್ ಗೆ ಆಗಮಿಸಿದ ಮಹಿಳೆ ತನ್ನ ಪತಿ ನೀಡಿದ ತ್ರಿವಳಿ ತಲಾಖ್ ಬಗ್ಗೆ ದೂರು ಸಲ್ಲಿಸಿದ್ದಾರೆ.
ಯೋಗಿ ಆದಿತ್ಯನಾಥ್
ಯೋಗಿ ಆದಿತ್ಯನಾಥ್

ಲಕ್ನೋ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ನಡೆಸುತ್ತಿದ್ದ ಜನತಾ ದರ್ಬಾರ್ ಗೆ ಆಗಮಿಸಿದ ಮಹಿಳೆ ತನ್ನ ಪತಿ ನೀಡಿದ ತ್ರಿವಳಿ ತಲಾಖ್ ಬಗ್ಗೆ ದೂರು ಸಲ್ಲಿಸಿದ್ದಾರೆ.

ಸಬ್ರೀನ್ ಎಂಬ ಮಹಿಳೆ ತನಗೆ ನ್ಯಾಯ ಕೊಡಿಸಬೇಕೆಂದು ಯೋಗಿ ಆದಿತ್ಯನಾಥ್ ಮೊರೆ ಹೋಗಿದ್ದಾರೆ.ತನ್ನ ಪತಿ ಮದುವೆಯಾದಾಗಿನಿಂದ ಕಿರುಕುಳ ನೀಡುತ್ತಿದ್ದು, ಫೋನಿನಲ್ಲಿ ತ್ರಿವಳಿ ತಲಾಖ್ ನೀಡಿದ್ದಾನೆ.  ಮುಖ್ಯಮಂತ್ರಿಗಳು ನನಗೆ ನ್ಯಾಯ ಒದಗಿಸುತ್ತಾರೆ ಎಂಬ ನಂಬಿಕೆಯಿಂದ ಇಲ್ಲಿಗೆ ಬಂದಿದ್ದೇನೆ ಎಂದು ಆಕೆ ಹೇಳಿದ್ದಾಳೆ.

ಜನತಾ ದರ್ಬಾರ್ ಮೂಲಕ ರಾಜ್ಯದ ಜನತೆಯ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡಲು ಸಿಎಂ ಮುಂದಾಗಿದ್ದಾರೆ. ಇತ್ತೀಚೆಗೆ ತ್ರಿವಳಿ ತಲಾಖ್ ಭಾರೀ ಸದ್ದು ಮಾಡುತ್ತಿದ್ದು, ಅನೇಕ ಮುಸ್ಲಿಮ್ ಪುರುಷರು ಇದನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com