ಅಕ್ರಮ ಆಸ್ತಿ ಪ್ರಕರಣ: ಜಾರಿ ನಿರ್ದೇಶನಾಲಯದಿಂದ ಸಿಎಂ ವೀರಭದ್ರ ಸಿಂಗ್ ಫಾರಂ ಹೌಸ್ ಮುಟ್ಟುಗೋಲು

ಅಕ್ರಮ ಆಸ್ತಿ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಹಿಮಾಚಲ ಸಿಎಂ ವೀರಭದ್ರ ಸಿಂಗ್ ಕುಟುಂಬಕ್ಕೆ ಸೇರಿದ ದೆಹಲಿಯ ಫಾರಂ ...
ವೀರಭದ್ರ ಸಿಂಗ್
ವೀರಭದ್ರ ಸಿಂಗ್

ನವದೆಹಲಿ:  ಅಕ್ರಮ ಆಸ್ತಿ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಹಿಮಾಚಲ ಸಿಎಂ ವೀರಭದ್ರ ಸಿಂಗ್ ಕುಟುಂಬಕ್ಕೆ ಸೇರಿದ ದೆಹಲಿಯ ಫಾರಂ ಹೌಸ್ ಮುಟ್ಟುಗೋಲು ಹಾಕಿಕೊಂಡಿದೆ.

ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿ 27 ಕೋಟಿ ರು ಮೌಲ್ಯದ ಫಾರಂ ಹೌಸ್ ಅನ್ನು  ಅಧಿಕಾರಿಗಳು ವಶಕ್ಕೆತೆಗೆದುಕೊಂಡಿದ್ದಾರೆ.

ಈ ಆಸ್ತಿಯ ಬೆಲೆ 6.61 ಕೋಟಿ, ಆದರೆ ಇದರ ಮಾರುಕಟ್ಟೆ ಮೌಲ್ಯ 27 ಕೋಟಿ ರೂ ಇದೆ ಎಂದು ಜಾರಿ ನಿರ್ದೇಶನಾಲಯ ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ರಮ ಆಸ್ತಿ ಪ್ರಕರಣ ಸಂಬಂಧ  ಸಿಎಂ ವೀರಭದ್ರ ಸಿಂಗ್ ವಿರುದ್ಧ ಜಾರಿ ನಿರ್ದೇಶನಾಲಯ 2015 ರಲ್ಲಿ ಸಿಬಿಐ ನ ಎಫ್ ಐಆರ್ ಆಧಾರದ ಮೇಲೆ ಕೇಸು ದಾಖಲಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com