200 ರು. ಮುಖಬೆಲೆ ನೋಟು ಮುದ್ರಣ ಪ್ರಸ್ತಾವನೆಗೆ ಆರ್ ಬಿಐ ಅನುಮೋದನೆ: ವರದಿ

200 ರು ಮುಖಬೆಲೆಯ ಹೊಸ ನೋಟುಗಳ ಮುದ್ರಣ ಪ್ರಸ್ತಾವನೆಗೆ ಅಫೆಕ್ಸ್ ಬ್ಯಾಂಕಿಂಗ್ ಅಥಾರಿಟಿ ಅನುಮೋದನೆ ನೀಡಿದೆ ಎಂದು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: 200 ರು ಮುಖಬೆಲೆಯ ಹೊಸ ನೋಟುಗಳ ಮುದ್ರಣ ಪ್ರಸ್ತಾವನೆಗೆ ಅಫೆಕ್ಸ್ ಬ್ಯಾಂಕಿಂಗ್ ಅಥಾರಿಟಿ ಅನುಮೋದನೆ ನೀಡಿದೆ ಎಂದು 'ಲೈವ್ ಮಿಂಟ್ ' ವರದಿ ಮಾಡಿದೆ.

ಕಳೆದ ತಿಂಗಳು ನಡೆದ ಮಂಡಳಿ ಸಭೆಯಲ್ಲಿ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ ಎಂದು ವರದಿಯಾಗಿದೆ. 200 ರು ನೋಟುಗಳ ಮುದ್ರಣಾ ಪ್ರಕ್ರಿಯೆ ಜೂನ್ ನಂತರ ಆರಂಭವಾಗುವ ಸಾಧ್ಯತೆಯಿದೆ. ಸರ್ಕಾರ ಅಧಿಕೃತವಾಗಿ ಒಪ್ಪಿಗೆ ನೀಡಿದ ನಂತರ ಮುದ್ರಣಾ ಕಾರ್ಯ ಆರಂಭವಾಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಹೊಸ ಭದ್ರತಾ ವೈಶಿಷ್ಟ್ಯಗಳೊಂದಿಗೆ 200 ರು ನೋಟು ಮುದ್ರಣವಾಗಲಿದೆ.

2016ರ ನವೆಂಬರ್ 8 ರಂದು 500 ಹಾಗೂ 1,000 ರು ಮುಖಬೆಲೆಯ ನೋಟುಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದ ನಂತರ ಹೊಸ ನೋಟುಗಳ ಮುದ್ರಣ ಮಾಡಲಾಗುವುದು ಎಂದು ಪ್ರಧಾನಿ ಮೋದಿ ಹೇಳಿದ್ದರು.  ಸದ್ಯ 200 ರು ನೋಟಿನ ಮುದ್ರಣದ ವಿಷಯ ಖಚಿತವಾಗಿದ್ದು,  ನೋಟನ್ನು ಮುದ್ರಿಸಿ ಚಲಾವಣೆಗೆ ತರಬೇಕಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com