ಬಡ ಮತ್ತು ತುಳಿತಕ್ಕೊಳಗಾದವರ ಸೇವೆಗೆ ಬಿಜೆಪಿ ಸದಾ ಸಿದ್ಧ: ಪ್ರಧಾನಿ

ಬಡವರು ಮತ್ತು ಸಮಾಜದ ಕಟ್ಟೆಕಡೆಯಲ್ಲಿರುವ, ತಿರಸ್ಕಾರಕ್ಕೆ ಒಳಗಾದ ಜನರ ಸೇವೆಯನ್ನು ಪಕ್ಷ...
ಬಿಜೆಪಿ ಸ್ಥಾಪನಾ ದಿನದ ಅಂಗವಾಗಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ. ಚಿತ್ರದಲ್ಲಿ ಅಮಿತ್ ಶಾ ಮತ್ತು ಇತರ ನಾಯಕರು ಇದ್ದಾರ
ಬಿಜೆಪಿ ಸ್ಥಾಪನಾ ದಿನದ ಅಂಗವಾಗಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ. ಚಿತ್ರದಲ್ಲಿ ಅಮಿತ್ ಶಾ ಮತ್ತು ಇತರ ನಾಯಕರು ಇದ್ದಾರ
ನವದೆಹಲಿ: ಬಡವರು ಮತ್ತು ಸಮಾಜದ ಕಟ್ಟೆಕಡೆಯಲ್ಲಿರುವ, ತಿರಸ್ಕಾರಕ್ಕೆ ಒಳಗಾದ ಜನರ ಸೇವೆಯನ್ನು  ಪಕ್ಷ ಮುಂದುವರಿಸಲಿದೆ. ಪಕ್ಷದ ಏಳಿಗೆಗಾಗಿ ದುಡಿದ ತಳಮಟ್ಟದ ಕಾರ್ಯಕರ್ತರನ್ನು ಈ ಸಂದರ್ಭದಲ್ಲಿ ನೆನೆಸಿಕೊಳ್ಳುವುದು ಮುಖ್ಯ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಬಿಜೆಪಿಯ 37ನೇ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಇತರ ಸಚಿವರು, ಶಾಸಕರು, ಕಾರ್ಯಕರ್ತರ ಜೊತೆ ಭಾಗವಹಿಸಿದರು. ದೆಹಲಿಯ ಬಿಜೆಪಿ ಕೇಂದ್ರ ಕಚೇರಿಗೆ ತೆರಳಿ ದೀನ್ ದಯಾಳ್ ಉಪಾಧ್ಯಾಯ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. 
ಬಿಜೆಪಿಯ ಸಂಸ್ಥಾಪನಾ ದಿನದ ಸಂದರ್ಭದಲ್ಲಿ ದೇಶಾದ್ಯಂತ ಇರುವ ಬಿಜೆಪಿ ಕುಟುಂಬ ಸದಸ್ಯರಿಗೆ ನಾನು ಶುಭಾಶಯ ತಿಳಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಸಮಾಜ ಸೇವೆಯ ಪ್ರಯತ್ನದೊಂದಿಗೆ ಪಕ್ಷವನ್ನು ಇಟ್ಟಿಗೆ ರೀತಿ ಕಟ್ಟಿದ ದಶಕಗಳಿಂದ ಕಠಿಣ ಶ್ರಮಪಟ್ಟು ದುಡಿಯುತ್ತಿರುವ ಬಿಜೆಪಿ ಕಾರ್ಯಕರ್ತರನ್ನು ಈ ಸಂದರ್ಭದಲ್ಲಿ ನೆನೆಸಿಕೊಳ್ಳಲು ಹೆಮ್ಮೆಯಾಗುತ್ತಿದೆ ಎಂದರು.
ಅಂತ್ಯೋದಯದ ಮಂತ್ರದೊಂದಿಗೆ ದೇಶದ ಬಡ ಮತ್ತು ಮಧ್ಯಮ ವರ್ಗದವರು ಸೇರಿದಂತೆ ಎಲ್ಲಾ ಜನರ ಸೇವೆ ಮಾಡುವ ಕಾರ್ಯ ಮುಂದುವರಿಯುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com