ರಸ್ತೆ ನಿರ್ಮಾಣ ಗುರಿಯನ್ನು ದಿನಕ್ಕೆ 40 ಕಿಲೋ ಮೀಟರ್ ಗೆ ಹೆಚ್ಚಿಸಲು ಪ್ರಯತ್ನ: ನಿತಿನ್ ಗಡ್ಕರಿ

ರಸ್ತೆ ನಿರ್ಮಾಣ ಗುರಿಯನ್ನು ಪ್ರಸ್ತುತ ಇರುವ ದಿನಕ್ಕೆ 23 ಕಿಲೋ ಮೀಟರ್ ನ್ನು 40 ಕಿಲೋ ಮೀಟರ್ ಗೆ...
ನಿತಿನ್ ಗಡ್ಕರಿ
ನಿತಿನ್ ಗಡ್ಕರಿ
ನವದೆಹಲಿ: ರಸ್ತೆ ನಿರ್ಮಾಣ ಗುರಿಯನ್ನು ಪ್ರಸ್ತುತ ಇರುವ ದಿನಕ್ಕೆ 23 ಕಿಲೋ ಮೀಟರ್ ನ್ನು 40 ಕಿಲೋ ಮೀಟರ್ ಗೆ ವಿಸ್ತರಿಸಲು ಸರ್ಕಾರ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದೆ ಎಂದು ಕೇಂದ್ರ ಸಾರಿಗೆ ಖಾತೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಮಾರ್ಚ್ 21, 2017ಕ್ಕೆ ಪ್ರತಿದಿನಕ್ಕೆ ಸರಾಸರಿ ರಸ್ತೆ ನಿರ್ಮಾಣ 23 ಕಿಲೋ ಮೀಟರ್ ಆಗಿತ್ತು. ಆದರೆ ಮುಂದಿನ ವರ್ಷದ ಗುರಿ ದಿನಕ್ಕೆ 40 ಕಿಲೋ ಮೀಟರ್ ಆಗಿದೆ. ಈ ಗುರಿಯನ್ನು ತಲುಪುವ ಆಶಾವಾದವಿದೆ ಎಂದು ಸ್ಟೀಲ್ ವಲಯದ ರಾಷ್ಟ್ರೀಯ ಸಮ್ಮೇಳನದಲ್ಲಿ ಹೇಳಿದರು.
ಕಳೆದ ಹಣಕಾಸು ವರ್ಷದಲ್ಲಿ 8,144 ಕಿಲೋ ಮೀಟರ್ ಉದ್ದದ ರಸ್ತೆಯನ್ನು ನಿರ್ಮಿಸಲಾಗಿತ್ತು. ದಿನಕ್ಕೆ 23 ಕಿಲೋ ಮೀಟರ್ ಉದ್ದದ ರಸ್ತೆ ನಿರ್ಮಿಸುವ ಮೂಲಕ ತಮ್ಮ ಸಚಿವಾಲಯ ದಾಖಲೆ ನಿರ್ಮಿಸಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ದಿನಕ್ಕೆ 2 ಕಿಲೋ ಮೀಟರ್ ವರೆಗೆ ಮಾತ್ರ ರಸ್ತೆ ನಿರ್ಮಾಣವಾಗುತ್ತಿತ್ತು ಎಂದರು.
ರಾಷ್ಟ್ರೀಯ ಹೆದ್ದಾರಿಯನ್ನು ಪ್ರಸ್ತುತ ಇರುವ 96,000 ಕಿಲೋ ಮೀಟರ್ ನಿಂದ 2,00,000 ಕಿಲೋ ಮೀಟರ್ ಗೆ ಹೆಚ್ಚಿಸಲಾಗುವುದು. ಈ ಯೋಜನೆಗೆ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯನ್ನು ಸರ್ಕಾರ ತೀವ್ರಗೊಳಿಸಲಿದೆ ಎಂದು ಹೇಳಿದರು.
 ದೆಹಲಿ-ಕತ್ರ ಮತ್ತು ದೆಹಲಿ-ಜೈಪುರ್, ಮುಂಬೈ-ಬರೋಡಾ ಎಕ್ಸ್ ಪ್ರೆಸ್ ವೇ ಸೇರಿದಂತೆ 11 ಎಕ್ಸ್ ಪ್ರೆಸ್ ವೇ ಗಳನ್ನು ನಿರ್ಮಿಸುವ ಕಾರ್ಯ ಇನ್ನು ಮೂರು ತಿಂಗಳಿನಲ್ಲಿ ಆರಂಭವಾಗಲಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com