ಉತ್ತರ ಪ್ರದೇಶ: ಸರ್ಕಾರದ ಯೋಜನೆಗಳ ಹೆಸರು ಬದಲಿಸಲು ಯೋಗಿ ಆದಿತ್ಯನಾಥ್ ಆದೇಶ

ಉತ್ತರ ಪ್ರದೇಶ ಸರ್ಕಾರದ ವಿವಿಧ ಯೋಜನೆಗಳಲ್ಲಿ ಬಳಸುತ್ತಿರುವ ಸಮಾಜವಾದಿ ಪದವನ್ನು ತೆಗೆದು ಮುಖ್ಯಮಂತ್ರಿ ಎಂಬ ಪದ ಬಳಸಬೇಕೆಂದು ಸಿಎಂ ಯೋಗಿ ಆದಿತ್ಯನಾಥ್ ...
ಯೋಗಿ ಆದಿತ್ಯನಾಥ್
ಯೋಗಿ ಆದಿತ್ಯನಾಥ್
ಲಕ್ನೋ: ಉತ್ತರ ಪ್ರದೇಶ ಸರ್ಕಾರದ ವಿವಿಧ ಯೋಜನೆಗಳಲ್ಲಿ ಬಳಸುತ್ತಿರುವ ಸಮಾಜವಾದಿ ಪದವನ್ನು ತೆಗೆದು ಮುಖ್ಯಮಂತ್ರಿ ಎಂಬ ಪದ ಬಳಸಬೇಕೆಂದು ಸಿಎಂ ಯೋಗಿ ಆದಿತ್ಯನಾಥ್ ಅದೇಶಿಸಿದ್ದಾರೆ.
ಸದ್ಯ ಜಾರಿಯಲ್ಲಿರುವ ಎಲ್ಲಾ ಸರ್ಕಾರಿ ಯೋಜನೆಗಳಲ್ಲೂ ಸಮಾಜವಾದಿ ಎಂಬ ಪದ ಬಳಕೆಯಾಗುತ್ತಿದೆ. ಅದನ್ನು ತೆಗೆದು ಹಾಕಿ ಮುಖ್ಯಮಂತ್ರಿ ಎಂದು ಎಲ್ಲಾ ಯೋಜನೆಗಳ ಹೆಸರನ್ನು ಬದಲಿಸಬೇಕೇಂದು ನಿನ್ನೆ ಸಂಜೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಿಎಂ ಆದೇಶಿಸಿದ್ದಾರೆ. 
ಉತ್ತರ ಪ್ರದೇಶದ ಎಲ್ಲಾ ಯೋಜನೆಗಳಿಗೂ ಸಮಾಜವಾದಿ ಎಂದು ಹೆಸರಿಸಲಾಗಿತ್ತು. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಆ್ಯಂಬುಲೆನ್ಸ್  ಅನ್ನು ಸಮಾಜವಾದಿ ಆ್ಯಂಬುಲೆನ್ಸ್  ಸರ್ವೀಸ್ ಎಂದು ಕರೆಯಲಾಗುತ್ತಿತ್ತು.
ಸಮಾಜವಾದಿ ಪಕ್ಷದ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಅಖಿಲೇಶ್ ಯಾದವ್ ಅವರ ಆಟೋಗ್ರಾಪ್ ವುಳ್ಳ  60 ಲಕ್ಷ ರೇಷನ್ ಕಾರ್ಡ್ ವಿತರಿಸದಿರಲು ಬಿಜೆಪಿ ಸರ್ಕಾರ ನಿರ್ಧರಿಸಿದೆ.
ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಿಗೂ 24 ಗಂಟೆ ಹಾಗೂ ಗ್ರಾಮೀಣ ಭಾಗಗಳಿಗೆ 18 ಗಂಟೆ ವಿದ್ಯುತ್ ಪೂರೈಕೆ ಮಾಡುವಂತೆ ಇಂಧನ ಇಲಾಖೆಗೆ ಯೋಗಿ ಆದಿತ್ಯನಾಥ್ ಆದೇಶಿಸಿದ್ದಾರೆ. 
ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಗಬಾರದೆಂದು ಆದೇಶಿಸಿರುವ ಸಿಎಂ ಮುಂದಿನ 100 ದಿನಗಳಲ್ಲಿ, 5ಲಕ್ಷ ಹೊಸ ವಿದ್ಯುತ್ ಸಂಪರ್ಕ ನೀಡಲಾಗುವುದು ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com