ರಾಷ್ಟ್ರಗೀತೆಗೆ ಅಗೌರವ ಆರೋಪ: ಜಮ್ಮು ವಿ.ವಿ. ಕ್ರೀಡಾ ಕೂಟಕ್ಕೆ ಎಬಿವಿಪಿ ತಡೆ

ಉದ್ಘಾಟನಾ ಸಮಾರಂಭದಲ್ಲಿ ಜಮ್ಮು-ಕಾಶ್ಮೀರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ರಾಷ್ಟ್ರಧ್ವಜಕ್ಕೆ ಅಗೌರವ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಜಮ್ಮು: ಉದ್ಘಾಟನಾ ಸಮಾರಂಭದಲ್ಲಿ ಜಮ್ಮು-ಕಾಶ್ಮೀರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ರಾಷ್ಟ್ರಧ್ವಜಕ್ಕೆ ಅಗೌರವ ತೋರಿಸಿದ್ದಾರೆ ಎಂಬ ಕಾರಣಕ್ಕೆ ಅಲ್ಲಿ ನಡೆಯುತ್ತಿರುವ ಅಂತರ ವಿಶ್ವವಿದ್ಯಾಲಯ ಕ್ರೀಡಾ ಕೂಟವನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಿಲ್ಲಿಸಿದ ಘಟನೆ ಇಂದು ನಡೆದಿದೆ.
ಎಲ್ಲಾ ಪಂದ್ಯಗಳನ್ನು ನಿಲ್ಲಿಸಿ ವಿದ್ಯಾರ್ಥಿಗಳು ಮೈದಾನ ಬಿಟ್ಟು ಹೋಗುವಂತೆ ಸೂಚಿಸಿದರು.
ಭಾರತ ಮಾತೆಗೆ ಅವಮಾನ ಮಾಡಿದರೆ ಹಿಂದೂಸ್ತಾನ ಸಹಿಸುವುದಿಲ್ಲ ಎಂಬ ಘೋಷಣೆಯನ್ನು ಎಬಿವಿಪಿ ಕಾರ್ಯಕರ್ತರು ಕೂಗುತ್ತಾ ಮೈದಾನದುದ್ದಕ್ಕೂ ಸಾಗಿದರು. ಹಿಂದೂಸ್ತಾನದಲ್ಲಿ ಬದುಕಬೇಕೆಂದರೆ ವಂದೇ ಮಾತರಂನ್ನು ಹಾಡಲೇಬೇಕು ಎಂದು ಹೇಳಿದರು.
ಈ ಬಗ್ಗೆ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಎಬಿವಿಪಿ ನಾಯಕ ಅವತಾರ್ ಸಿಂಗ್ ಜಸ್ರೋಟಿಯಾ, ಮಾರ್ಚ್ 5ರಂದು ಜಮ್ಮು-ಕಾಶ್ಮೀರದ ಹಲವು ವಿದ್ಯಾರ್ಥಿಗಳು ರಾಷ್ಟ್ರಗೀತೆಗೆ ಅಗೌರವ ತೋರಿಸಿದ್ದಲ್ಲದೆ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ. ದೇಶದ್ರೋಹದ ಕೆಲಸ ಮಾಡಿದ್ದಾರೆ.  ಈ ಬಗ್ಗೆ ತನಿಖೆ ನಡೆಸಿ ವಿದ್ಯಾರ್ಥಿಗಳಿಂದ ಕ್ಷಮಾಪಣಾ ಪತ್ರ ಪಡೆದುಕೊಳ್ಳುವಂತೆ 48 ಗಂಟೆಗಳ ಕಾಲಾವಧಿಯನ್ನು ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ನೀಡಿದ್ದೆವು. ಆದರೆ ವಿವಿ ಆಡಳಿತ ನಮ್ಮ ಬೇಡಿಕೆಯನ್ನು ಈಡೇರಿಸಿಲ್ಲ. ಹಾಗಾಗಿ ಕ್ರೀಡೆಯನ್ನು ನಿಲ್ಲಿಸುತ್ತಿದ್ದೇವೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com