ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಜೈಲಿಗೆ ಹೋಗಲು ಸಿದ್ಧ: ಉಮಾಭಾರತಿ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಿಚಾರ ನಂಬಿಕೆಯ ವಿಷಯವಾಗಿದ್ದು, ಅದಕ್ಕಾಗಿ ತಾವು ಜೈಲಿಗೆ ಹೋಗಲು ಸಿದ್ಧ ಇರುವುದಾಗಿ ಕೇಂದ್ರ ಜಲ ...
ಉಮಾ ಭಾರತಿ
ಉಮಾ ಭಾರತಿ
ಲಕ್ನೋ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಿಚಾರ ನಂಬಿಕೆಯ ವಿಷಯವಾಗಿದ್ದು, ಅದಕ್ಕಾಗಿ ತಾವು ಜೈಲಿಗೆ ಹೋಗಲು ಸಿದ್ಧ ಇರುವುದಾಗಿ ಕೇಂದ್ರ ಜಲ ಸಂಪನ್ಮೂಲ ಸಚಿವೆ ಉಮಾ ಭಾರತಿ ಹೇಳಿದ್ದಾರೆ.
ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಸಂಬಂಧ ಬಿಜೆಪಿ ಹಿರಿಯ ಮುಖಂಡರಾದ ಎಲ್ .ಕೆ. ಅಡ್ವಾಣಿ, ಮುರಳಿ ಮನೋಹರ ಜೋಶಿ, ಕೇಂದ್ರ ಸಚಿವೆ ಉಮಾ ಭಾರತಿ ಹಾಗೂ ರಾಜಸ್ಥಾನ ರಾಜ್ಯಪಾಲ ಕಲ್ಯಾಣ ಸಿಂಗ್ ಸೇರಿ 20 ಮಂದಿಗೆ ಸುಪ್ರೀಂಕೋರ್ಟ್ ನೋಟಿಸ್ ನೀಡಿದೆ.
ರಾಮಮಂದಿರ ನಿರ್ಮಾಣ ನನಗೆ ನಂಬಿಕೆಯ ವಿಷಯವಾಗಿದ್ದು, ಅದರ ಬಗ್ಗೆ ನನಗೆ ಹೆಮ್ಮಿಯಿದೆ, ಅದಕ್ಕಾಗಿ ಜೈಲಿಗೆ ಹೋಗಬೇಕಾದ ಸಂದರ್ಭ ಬಂದರೇ ಜೈಲಿಗೆ ಹೋಗಲು ನಾನು ಸಿದ್ಧ ಎಂದು ಫೈರ್ ಬ್ರಾಂಡ್ ಖ್ಯಾತಿಯ ಉಮಾ ಭಾರತಿ ಹೇಳಿದ್ದಾರೆ.
ರಾಮ ಮಂದಿರ ನಿರ್ಮಾಣವಿಷಯ ಸಂಬಂಧ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಜೊತೆ ಮಾತುಕತೆ ನಡೆಸಿದರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ನಾವು (ಯೋಗಿ ಮತ್ತು ಉಮಾ) ಅಪರಿಚಿತರಲ್ಲ, ಯೋಗಿ ಆದಿತ್ಯನಾಥ್ ಅವರ ಗುರು ಮಹಂತ್ ಅವೈದನಾಥ್ ರಾಮ ಮಂದಿರ ನಿರ್ಮಾಣ ಚಳುವಳಿಯ ಮುಖಂಡರಾಗಿದ್ದರು ಎಂದು ಉಮಾ ಭಾರತಿ ತಿಳಿಸಿದ್ದಾರೆ.
ಸದ್ಯ ವಿಷಯ ಸುಪ್ರೀಂಕೋರ್ಟ್ ನಲ್ಲಿ ಇರುವುದರಿಂದ ಕೋರ್ಟ್ ತೀರ್ಪು ಬರುವವರೆಗೂ ಈ ಸಂಬಂಧ ಹೆಚ್ಚಿಗೆ ಮಾತನಾಡುವುದಿಲ್ಲ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com