ಹರ್ಯಾಣದಲ್ಲಿ ಇದೇ ಮೊದಲ ಬಾರಿಗೆ ಪ್ರತಿ ಸಾವಿರ ಗಂಡು ಮಕ್ಕಳಿಗೆ 950 ಹೆಣ್ಣು ಮಕ್ಕಳು; ಮನೋಹರ್ ಲಾಲ್ ಕಟ್ಟರ್

ಹರ್ಯಾಣ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಲಿಂಗಾನುಪಾತದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಚಂಡೀಗಢ: ಹರ್ಯಾಣ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಲಿಂಗಾನುಪಾತದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ 950ಕ್ಕೆ ತಲುಪಿದೆ.
ಈ ವರ್ಷದ ಮಾರ್ಚ್ ಗೆ ಲಿಂಗಾನುಪಾತದಲ್ಲಿ ಪ್ರತಿ ಸಾವಿರ ಗಂಡು ಮಕ್ಕಳಿಗೆ 950 ಹೆಣ್ಣು ಮಕ್ಕಳಿದ್ದಾರೆ.ಪ್ರಧಾನ ಮಂತ್ರಿಯವರ ಬೇಟಿ ಬಚಾವೊ, ಬೇಟಿ ಪಡಾವೊ ಕಾರ್ಯಕ್ರಮದ ನಂತರ ರಾಜ್ಯದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಮತ್ತು ಪರಿಸ್ಥಿತಿ ಕೂಡ ಬಹಳ ಸುಧಾರಿಸಿದೆ ಎಂದು ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ತಿಳಿಸಿದ್ದಾರೆ.
ಹೆಣ್ಣು ಭ್ರೂಣ ಹತ್ಯೆ, ಭ್ರೂಣ ಲಿಂಗ ಪತ್ತೆ ತಡೆ ಮೊದಲಾದ ಅಭಿಯಾನಗಳು ರಾಜ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ಬರುತ್ತಿದೆ. ಪ್ರಿ ಕನ್ಸೆಪ್ಷನ್ ಅಂಡ್ ಪ್ರಿ ನೇಟಲ್ ಡಯೊಗ್ನಾಸ್ಟಿಕ್ ಟೆಕ್ನಿಕ್ ಕಾಯ್ದೆ 1994, ಮೆಡಿಕಲ್ ಟರ್ಮಿನೇಷನ್ ಆಫ್ ಪ್ರೆಗ್ನೆನ್ಸಿ ಕಾಯ್ದೆ 1971 ಕೂಡ ಪರಿಣಾಮಕಾರಿಯಾಗಿ ಜಾರಿಗೆ ಬರುತ್ತಿದೆ. ಈ ಕಾಯ್ದೆಗಳಡಿ ರಾಜ್ಯದಲ್ಲಿ 430 ಎಫ್ಐಆರ್ ಗಳನ್ನು ಕಳೆದ 2 ವರ್ಷಗಳಲ್ಲಿ ದಾಖಲಿಸಲಾಗಿದೆ ಎಂದು ಕಟ್ಟರ್ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com