ಸುಪ್ರೀತ್ ಕೌರ್
ದೇಶ
ಕಾರು ಅಪಘಾತದಲ್ಲಿ ಪತಿ ಸತ್ತ ಸುದ್ದಿಯನ್ನು ಬ್ರೇಕಿಂಗ್ ನ್ಯೂಸ್ ಆಗಿ ಓದಿದ ನಿರೂಪಕಿ!
ಸ್ವಲ್ಪವೂ ವಿಚಲಿತರಾಗದೇ ಕಾರು ಅಪಘಾತದಲ್ಲಿ ಪತಿಯ ಸಾವಿನ ಸುದ್ದಿಯನ್ನು ಬ್ರೇಕಿಂಗ್ ನ್ಯೂಸ್ ಆಗಿ ನಿರೂಪಕಿಯೊಬ್ಬರು ವಾಚಿಸಿದ್ದಾರೆ....
ಛತ್ತೀಸ್ ಗಢ: ಸ್ವಲ್ಪವೂ ವಿಚಲಿತರಾಗದೇ ಕಾರು ಅಪಘಾತದಲ್ಲಿ ಪತಿಯ ಸಾವಿನ ಸುದ್ದಿಯನ್ನು ಬ್ರೇಕಿಂಗ್ ನ್ಯೂಸ್ ಆಗಿ ನಿರೂಪಕಿಯೊಬ್ಬರು ವಾಚಿಸಿದ್ದಾರೆ.
ಇಂದು ಬೆಳಗ್ಗೆ ಘಟನೆ ನಡೆದಿದ್ದು, ಕಾರು ಅಪಘಾತದಲ್ಲಿ ನಿರೂಪಕಿ ಸುಪ್ರೀತ್ ಕೌರ್ ಅವರ ಪತಿ ಸಾವನ್ನಪ್ಪಿದ್ದಾರೆ.
ಇಂಥದ್ದೊಂದು ಮನಕಲಕುವ ಘಟನೆ ನಡೆದದ್ದು ಛತ್ತೀಸ್‌ಗಢದಲ್ಲಿ. ಅಲ್ಲಿನ ಪ್ರಸಿದ್ಧ ಖಾಸಗಿ ಸುದ್ದಿವಾಹಿನಿ ಐಬಿಸಿ–24ರ ನಿರೂಪಕಿ ಸುಪ್ರೀತ್ ಕೌರ್ ಅವರೇ ಪತಿ ಮೃತಪಟ್ಟದ್ದನ್ನು ಬ್ರೇಕಿಂಗ್ ನ್ಯೂಸ್ ಆಗಿ ಓದಿ ಹೇಳಿದ ನತದೃಷ್ಟೆ.
ತಾನು ಕಾರ್ಯನಿರ್ವಹಿಸುವ ಸುದ್ದಿವಾಹಿನಿಯಲ್ಲಿ ಎಂದಿನಂತೆ ಶನಿವಾರ ಬಳಿಗ್ಗೆ ಸುದ್ದಿ ವಾಚಿಸುತ್ತಿದ್ದರು. ಅಷ್ಟರಲ್ಲಿ ವರದಿಗಾರರೊಬ್ಬರು ದೂರವಾಣಿ ಕರೆ ಮಾಡಿ ಕಾರು ಅಪಘಾತದ ಬ್ರೇಕಿಂಗ್ ಸುದ್ದಿ ನೀಡಿದರು. ರೆನಾಲ್ಟ್ ಡಸ್ಟರ್ ಕಾರು ಅಪಘಾತಕ್ಕೀಡಾಗಿರುವುದಾಗಿಯೂ ಅಪಘಾತದಲ್ಲಿ ಮೂವರು ಮೃತಪಟ್ಟಿರುವುದಾಗಿಯೂ ತಿಳಿಸಿದರು. ಆ ಸುದ್ದಿಯನ್ನು ನಿರೂಪಕಿ ವಾಚಿಸಿದರು.
ಅಪಘಾತದ ಸಮಯ, ಮಾರ್ಗ, ಕಾರು, ಅದರಲ್ಲಿದ್ದ ಜನರ ವಿವರ ಎಲ್ಲವನ್ನೂ ತಿಳಿದುಕೊಂಡಾಗ ಅದು ತನ್ನ ಪತಿ ಚಲಿಸುತ್ತಿರುವ ಕಾರೇ ಎಂಬುದು ಕೌರ್‌ಗೆ ಗೊತ್ತಾಗಿದೆ. ಆದರೂ ಅವರು ಧೃತಿಗೆಡದೆ ತಮ್ಮ ಕರ್ತವ್ಯ ಪೂರೈಸಿದ್ದಾರೆ. ತದನಂತರ ನ್ಯೂಸ್ ರೂಂನಿಂದ ಹೊರ ಬಂದು ಬಂದುಗಳಿಗೆ ಕಾಲ್ ಮಾಡಿ ಪತಿಯ ಬಗ್ಗೆ ವಿಚಾರಿಸಿದ್ದಾರೆ. ಆಗ ಇತರೆ ಸಹದ್ಯೋಗಿಗಳು ಆಕೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
28 ವರ್ಷ ವಯಸ್ಸಿನ ಕೌರ್ ಅವರು ಐಬಿಸಿ-24 ಸುದ್ದಿವಾಹಿನಿಯಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಕಳೆದ ವರ್ಷ ರಾಯಪುರದ ಹರ್ಷದ್ ಕಾವಡೆ ಅವರನ್ನು ವಿವಾಹವಾಗಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ