500 ಮೀ ವ್ಯಾಪ್ತಿಯಲ್ಲಿ ಮದ್ಯದಂಗಡಿ: ಸುಪ್ರೀಂ ಕೋರ್ಟ್ ಆದೇಶ ಪಾಲಿಸಲು ಬಾರ್ ನ ವಿನೂತನ ಕ್ರಮ!

ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಯ 500 ಮೀ ವ್ಯಾಪ್ತಿಯಲ್ಲಿ ಮದ್ಯದ ಅಂಗಡಿಗಳು ಇರಬಾರದು ಎಂಬ ಸುಪ್ರೀಂ ಕೋರ್ಟ್ ನ ಆದೇಶವನ್ನು ಪಾಲಿಸಲು ಕೇರಳದ ಬಾರ್ ಮಾಲಿಕರೊಬ್ಬರು ವಿನೂತನ ಪರಿಹಾರ ಕಂಡುಕೊಂಡಿದ್ದಾರೆ.
ಮದ್ಯದ ಅಂಗಡಿ
ಮದ್ಯದ ಅಂಗಡಿ
ಕೊಚ್ಚಿ:ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಯ 500 ಮೀ ವ್ಯಾಪ್ತಿಯಲ್ಲಿ ಮದ್ಯದ ಅಂಗಡಿಗಳು ಇರಬಾರದು ಎಂಬ ಸುಪ್ರೀಂ ಕೋರ್ಟ್ ನ ಆದೇಶವನ್ನು ಪಾಲಿಸಲು ಕೇರಳದ ಬಾರ್ ಮಾಲಿಕರೊಬ್ಬರು ವಿನೂತನ ಪರಿಹಾರ ಕಂಡುಕೊಂಡಿದ್ದಾರೆ. 500 ಮೀ ವ್ಯಾಪ್ತಿಯಲ್ಲೇ ಬರುವ ಬಾರ್ ನ್ನು ಸ್ಥಳಾಂತರಗೊಳಿಸದೇ ಸುಪ್ರೀಂ ಕೋರ್ಟ್ ನ ಆದೇಶ ಪಾಲನೆ ಮಾಡಲಾಗಿದೆ. 
ಎರ್ನಾಕುಲಂ ನ ರಾಜ್ಯ ಹೆದ್ದಾರಿಯ ಪಕ್ಕದಲ್ಲೇ ಇರುವ ಐಶ್ವರ್ಯ ಬೀರ್&ವೈನ್ ಎಂಬ ಮದ್ಯದ ಅಂಗಡಿ ಬಾರ್ ಒಳಗೆ ಪ್ರವೇಶಿಸಬೇಕೆಂದರೆ ನೇರವಾಗಿ ಪ್ರವೇಶಿಸಲು ಸಾಧ್ಯವಿಲ್ಲ. ಬದಲಾಗಿ 500 ಮೀ ನಷ್ಟು ದೂರವನ್ನು ಬಳಸಿ ಪ್ರವೇಶಿಸಬೇಕಾಗುತ್ತದೆ. ಇದಕ್ಕಾಗಿ ಬಾರ್ ನ ಮಾಲೀಕರು 1.5 ಲಕ್ಷ ರೂಪಾಯಿಯಷ್ಟು ಹಣವನ್ನು ವ್ಯಯಿಸಿದ್ದಾರೆ.
ಒಂದು ವೇಳೆ ಸುಪ್ರೀಂ ಕೋರ್ಟ್ ನ ಆದೇಶವನ್ನು ಪಾಲಿಸಲು ಸಾಧ್ಯವಾಗದೇ ಇದ್ದಲ್ಲಿ 500 ಮೀ ವ್ಯಾಪ್ತಿಯಾಲ್ಲಿ ಮದ್ಯದ ಅಂಗಡಿ ಹೊಂದಿರುವ ಎಲ್ಲಾ ಬಾರ್ ಮಾಲೀಕರು ಸಹ ಬಾರ್ ನ್ನು ಸ್ಥಳಾಂತರಗೊಳಿಸದೇ, ಮದ್ಯದ ಅಂಗಡಿಗೆ ಪ್ರವೇಶ ಮಾಡುವುದಕ್ಕೆ 500 ಮೀ ನಷ್ಟು ದೂರವನ್ನು ಕ್ರಮಿಸುವ ರೀತಿಯಲ್ಲಿ ಹಾದಿ ನಿರ್ಮಿಸಲು ಇದೊಂದು ಮಾದರಿಯಾಗಿದ್ದು, ಇದನ್ನೇ ಅಳವಡಿಸಿಕೊಳ್ಳುವುದಕ್ಕೆ ಚಿಂತನೆ ನಡೆಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com