ಡಿಜಿಟಲ್‌ ವಹಿವಾಟು ಲಕ್ಕಿ ಡ್ರಾ: ಸೆಂಟ್ರಲ್‌ ಬ್ಯಾಂಕ್‌ ಆಫ್ ಇಂಡಿಯಾ ಗ್ರಾಹಕನಿಗೆ 1 ಕೋಟಿ ರೂ. ಬಹುಮಾನ

ವೆಂಬರ್ 8 ರಂದು ಪ್ರಧಾನಿ ನರೇಂದ್ರ ಮೋದಿ ನೋಟು ನಿಷೇಧ ಮಾಡಿದ ನಂತರ ಡಿಜಿಟಲ್‌ ವಹಿವಾಟು ಉತ್ತೇಜನಕ್ಕೆ ಕೇಂದ್ರ ಸರ್ಕಾರ ರೂಪಿಸಿದ್ದ ‘ಲಕ್ಕಿ ಗ್ರಾಹಕ’...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ನವೆಂಬರ್ 8 ರಂದು ಪ್ರಧಾನಿ ನರೇಂದ್ರ ಮೋದಿ ನೋಟು ನಿಷೇಧ ಮಾಡಿದ ನಂತರ ಡಿಜಿಟಲ್‌ ವಹಿವಾಟು ಉತ್ತೇಜನಕ್ಕೆ ಕೇಂದ್ರ ಸರ್ಕಾರ ರೂಪಿಸಿದ್ದ ‘ಲಕ್ಕಿ ಗ್ರಾಹಕ’ ಯೋಜನೆಯಲ್ಲಿ ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾದ ಗ್ರಾಹಕ ರು.1 ಕೋಟಿ ಬಹುಮಾನ ಗೆದ್ದಿದ್ದಾರೆ.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕ ಈ ಯೋಜನೆಯಲ್ಲಿ 1,590 ರೂಪಾಯಿ ಡಿಜಿಟಲ್ ವಹಿವಾಟು ನಡೆಸಿದ್ದರು. ರಾಷ್ಟ್ರಪತಿ ಭವನದಲ್ಲಿ ಡಿಜಿಟಲ್‌ ಯೋಜನೆ ಉತ್ತೇಜನದ 100 'ಲಕ್ಕಿ ಗ್ರಾಹಕ'ರನ್ನು ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರು ಲಾಟರಿ ಎತ್ತುವ ಮೂಲಕ ಆಯ್ಕೆ ಮಾಡಿದರು.
ಗ್ರಾಹಕರ ವಿಭಾಗದಲ್ಲಿ ಮೊದಲ ಬಹುಮಾನ ರು 1ಕೋಟಿಯನ್ನು ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾದ ಗ್ರಾಹಕ, ಎರಡನೇ ಬಹುಮಾನ ರು. 50 ಲಕ್ಷವನ್ನು ಬ್ಯಾಂಕ್‌ ಆಫ್‌ ಬರೋಡಾದ ಗ್ರಾಹಕ, ತೃತೀಯ ಬಹುಮಾನ ರು. 25 ಲಕ್ಷವನ್ನು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ ಗ್ರಾಹಕರು ಗಳಿಸಿದ್ದಾರೆ. ಡಿಜಿ–ಧನ ವ್ಯಾಪಾರ ಯೋಜನೆ’ ವಿಭಾಗದಲ್ಲಿ ಮೂವರು 50 ಲಕ್ಷ, ರು 25 ಲಕ್ಷ, ರು 12 ಲಕ್ಷ ಬಹುಮಾನ ಗೆದ್ದಿದ್ದಾರೆ.
ಏ.14ರಂದು ನಾಗಪುರದಲ್ಲಿ ನಡೆಯುವ ಡಾ.ಬಿ.ಆರ್‌. ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಹುಮಾನ ವಿತರಿಸಲಿದ್ದಾರೆ. ಇ–ಪಾವತಿಯನ್ನು ಪ್ರೋತ್ಸಾಹಿಸಲು ರೂಪಸಿರುವ ‘ಲಕ್ಕಿ ಗ್ರಾಹಕ ಯೋಜನೆ’ ಮತ್ತು ‘ಡಿಜಿ–ಧನ ವ್ಯಾಪಾರ ಯೋಜನೆ’ಗಳಿಗೆ ದೇಶದ ಆಯ್ದ ನೂರು ನಗರಗಳಲ್ಲಿ ಡಿ.25ರಂದು ಚಾಲನೆ ನೀಡಲಾಗಿತ್ತು.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com