'ನನ್ನ ಮಕ್ಕಳು ಬಡತನದಲ್ಲಿ ಸಾಯಬಾರದು': 500 ಕೋಟಿ ರು. ಭೂಹಗರಣದ ಬಗ್ಗೆ ಲಾಲು

ನನ್ನ ಮಕ್ಕಳಿಗೆ ಸ್ವಂತ ಉದ್ಯಮ ಮಾಡುವ ಹಕ್ಕಿದೆ, ಅವರು ಬಡತನದಿಂದ ಸಾಯುವುದನ್ನು ನಾನು ಬಯಸುವುದಿಲ್ಲ ಎಂದು ಮೇವು ಹಗರಣದಲ್ಲಿ....
ಲಾಲು ಪ್ರಸಾದ್ ಯಾದವ್
ಲಾಲು ಪ್ರಸಾದ್ ಯಾದವ್
Updated on
ಪಾಟ್ನಾ: ನನ್ನ ಮಕ್ಕಳಿಗೆ ಸ್ವಂತ ಉದ್ಯಮ ಮಾಡುವ ಹಕ್ಕಿದೆ, ಅವರು ಬಡತನದಿಂದ ಸಾಯುವುದನ್ನು ನಾನು ಬಯಸುವುದಿಲ್ಲ ಎಂದು ಮೇವು ಹಗರಣದಲ್ಲಿ ಜೈಲು ಶಿಕ್ಷೆಗೆ ಒಳಗಾಗಿ ಈಗ ಜಾಮೀನಿನ ಮೇಲೆ ಹೊರಗಿರುವ ಆರ್ ಜೆಡಿ ಮುಖ್ಯಸ್ಥ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್‌ ಯಾದವ್ ಅವರು ಹೇಳಿದ್ದಾರೆ.
ಲಾಲು ಅವರ ಇಬ್ಬರು ಪುತ್ರರು ನಿತೀಶ್‌ ಕುಮಾರ್‌ ಸಂಪುಟದಲ್ಲಿ ಸಚಿವರಾಗಿದ್ದು, ಅವರ ವಿರುದ್ಧ ಈಗ 500 ಕೋಟಿ ರು.ಗಳ ಭೂಹಗರಣದ ಆರೋಪ ಬಂದಿದೆ. ಆದರೆ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಲಾಲು ಪ್ರಸಾದ್ ಯಾದವ್ ಅವರು, ನನ್ನ ಮಕ್ಕಳಿಗೆ ಸ್ವಂತ ಉದ್ಯಮ ಮಾಡುವ ಹಕ್ಕಿದೆ ಎಂದಿದ್ದಾರೆ.
ಲಾಲು ಪುತ್ರರಾದ ಸಚಿವ ತೇಜ್‌ ಪ್ರತಾಪ್‌ ಮತ್ತು  ಸಚಿವ ತೇಜಸ್ವಿ ಯಾದವ್‌ ಪಟ್ನಾ ಹೊರವಲಯದಲ್ಲಿ 60 ಕೋಟಿ ರುಪಾಯಿ ಬೆಲೆಬಾಳುವ ಎರಡು ಎಕರೆ ಜಮಿಮಿನನ ಮೂವರು ಒಡೆಯರಲ್ಲಿ ಇಬ್ಬರಾಗಿದ್ದಾರೆ. ಮೂರನೇ ಒಡತಿ ಸ್ವತಃ ಅವರ ತಾಯಿ, ರಾಬ್ರಿ ದೇವಿ. ಈ ಭೂಮಿಯಲ್ಲಿ ಇದೀಗ ಬಿಹಾರದ ಮತ್ತು ಲಾಲು ಪಕ್ಷದ ಓರ್ವ ಶಾಸಕರು ಬಿಹಾರದಲ್ಲೇ ಅತೀ ದೊಡ್ಡದೆನಿಸಲಿರುವ 500 ಕೋಟಿ ರೂ. ವೆಚ್ಚದ ಮಾಲ್‌ ಒಂದನ್ನು ನಿರ್ಮಿಸುತ್ತಿದ್ದಾರೆ. 
ಈ ಮಾಲ್‌ ಅರ್ಧ ಭಾಗದ ಒಡೆತನವು ಶಾಸಕನದ್ದಾಗಿರುತ್ತದೆ ಮತ್ತು ಉಳಿದರ್ಧ ಭಾಗಕ್ಕೆ ಲಾಲು ಸಚಿವ ಪುತ್ರ ದ್ವಯರು ಮತ್ತು ಅವರ ತಾಯಿ ರಾಬ್ರಿ ದೇವಿ ಒಡೆಯರಾಗಿರುತ್ತಾರೆ. ಈ ಯೋಜನೆಯ ಈಗಿನ ಅಂದಾಜು ವೆಚ್ಚ 500 ಕೋಟಿ ರುಪಾಯಿಗಳು ಎಂದು ಲಾಲು ಪ್ರಸಾದ್‌ ಯಾದವ್‌ ಅವರಿಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಳೆದ ವಾರ ಬಿಜೆಪಿ ಸುಶೀಲ್‌ ಕುಮಾರ್‌ ಯಾದವ್‌ ಈ ಯೋಜನೆಯ ಸ್ಥಳವನ್ನು ಲಾಲು ಕುಟುಂಬಕ್ಕೆ ಅಕ್ರಮವಾಗಿ ವರ್ಗಾಯಿಸಲಾಗಿದ್ದು, 2008ರಲ್ಲಿ ಲಾಲು ಅವರು ಕೇಂದ್ರ ರೈಲ್ವೇ ಸಚಿವರಾಗಿದ್ದಾಗಿದಾ ಪುರಿ ಮತ್ತು ರಾಂಚಿಯಲ್ಲಿ ರೈಲ್ವೇಗಾಗಿ ಎರಡು ಹೊಟೇಲ್‌ಗ‌ಳನ್ನು ರೂಪಿಸಲು 15 ವರ್ಷಗಳ ಲೀಸ್‌ ಮೇಲೆ ಭೂಮಿ ನೀಡಲಾಗಿತ್ತು. ಆದರೆ ಇದಕ್ಕೆ ಮೊದಲು ಅವರು ಪಟ್ನಾದಲ್ಲಿನ ಎರಡು ಎಕರೆ ಭೂಮಿಯನ್ನು ಲಾಲು ಪಕ್ಷದ ಸಂಸದನಾಗಿದ್ದ ಪ್ರೇಮ್‌ ಗುಪ್ತಾ ಎಂಬವರ ಪತ್ನಿಯ ಒಡೆತನದ ಕಂಪೆನಿಯೊಂದಕ್ಕೆ ಮಾರಿದ್ದರು ಎಂದು ಆರೋಪಿಸಿದ್ದರು.
ಎರಡು ವರ್ಷ ಹಿಂದೆ ಈ ಕಂಪೆನಿಯ ಹೆಸರನ್ನು  ಲಾರಾ (ಲಾ+ಲಾಲು, ರಾ + ರಾಬ್ರಿ ದೇವಿ) ಎಂದು ಬದಲಾಯಿಸಲಾಗಿ ಅದರ ಮೂವರು ನಿದೇರ್ಶಕರ ಸ್ಥಾನವನ್ನು  ಲಾಲು ಅವರು ಸಚಿವ ದ್ವಯ ಪುತ್ರರು ಮತ್ತು ತಾಯಿ ತುಂಬಿದರು. ಸಚಿವದ್ವಯ ಪುತ್ರರು ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಯಾದವ್‌ ಅವರ ಸಚಿವ ಸಂಪುಟ ವರ್ಷಂಪ್ರತಿ ಸಲ್ಲಿಸುವ ಆದಾಯ ಘೋಷಣೆಯ ಪ್ರಕಾರ ತಮ್ಮ ಆದಾಯ ವಿವರಗಳನ್ನು ನೀಡಿದ್ದರಾದರೂ ಅದರಲ್ಲಿ  ತಾವು ಲಾರಾ ಕಂಪೆನಿಯ ನಿರ್ದೇಶಕರಾಗಿರುವುದನ್ನು ಘೋಷಿಸಿಕೊಂಡಿಲ್ಲ. ಹಾಗಾಗಿ ಲಾಲು ಪುತ್ರರ ಒಡೆತನದ ಕಂಪೆನಿಯ ಮೂಲಕ 500 ಕೋಟಿ ರೂ.ಗಳ ಬೇನಾಮಿ  ವ್ಯವಹಾರನಡೆದಿದೆ. ಈಚೆಗೆ ರಾಜ್ಯ ಸರಕಾದಿಂದ ಒಪ್ಪಿಗೆ ಪಡೆದು ನಡೆಯುತ್ತಿರುವ ತನಿಖೆಯಲ್ಲಿ ಲಾಲು ಸಚಿವ ಪುತ್ರ ದ್ವಯ ಮತ್ತು ತಾಯಿಯ ಒಡೆತನಕ್ಕೆ ಸೇರಿರುವ ಎರಡೆಕರೆ ಭೂಮಿಯೂ ಸೇರಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com