ರೋಹ್ಟಕ್: ಮುಸ್ಲಿಂ ವ್ಯಕ್ತಿಯೋರ್ವ ತನ್ನ ಮಗಳಿಗೆ ಮದುವೆಯ ಉಡುಗೊರೆಯಾಗಿ ಹಸುವನ್ನು ನೀಡಿ ಎಲ್ಲರ ಗಮನ ಸೆಳೆದಿದ್ದಾನೆ.
ಹರಿಯಾಣದ ಸೋನಿಪತ್ ಜಿಲ್ಲೆಯ ಖರ್ಖೋಡ್ಡಾ ಗ್ರಾಮದ ನೂರ್ ಖಾನ್ ಎಂಬಾತ ಮಗಳಿಗೆ ಹಸುವನ್ನು ಉಡುಗೊರೆಯಾಗಿ ನೀಡಿರುವ ತಂದೆ. ಸೋಮವಾರ ಮಗಳ ವಿವಾಹ ನಡೆದಿದ್ದು, ಸಮಾರಂಭದಲ್ಲಿ ಆಕೆಗೆ ಹಸುವನ್ನು ಉಡುಗೊರೆಯಾಗಿ ನೀಡಿದ್ದಾನೆ.
ನನ್ನ ಮಗಳಿಗೆ ಹಸು ಎಂದರೆ ತುಂಬಾ ಇಷ್ಟ. ನಮ್ಮ ಮನೆಯಲ್ಲಿ ಸ್ಥಳದ ಕೊರತೆಯಿಂದ ಹಸು ಸಾಕಲು ಆಗಿರಲಿಲ್ಲ. ಹೀಗಾಗಿ ಆಕೆಯ ಮದುವೆಯ ಗಿಫ್ಟ್ ಆಗಿ ಹಸು ನೀಡಿದ್ದಾನೆ ಹಸು ಬೆಲೆ 11 ಸಾವಿರದಿಂದ 15 ಸಾವಿರ ರೂಪಾಯಿ ಇರಬೇಕೆಂದು ಅಂದಾಜಿಸಲಾಗಿದೆ.
ಇನ್ನು, ಮುಸ್ಲಿಂ ತಂದೆಯೊಬ್ಬ ಮಗಳಿಗೆ ಮದುವೆಯ ಉಡುಗೊರೆಯಾಗಿ ಹಸು ನೀಡಿದ್ದು ಹರಿಯಾಣದಲ್ಲಿ ಇದೇ ಮೊದಲು ಎನ್ನಲಾಗುತ್ತಿದೆ.
ಇನ್ನು ತಂದೆಯಿಂದ ಹಸುವನ್ನು ಉಡುಗೊರೆಯಾಗಿ ಪಡೆದಿರುವ ಪುತ್ರಿ ಗುಲ್ಷಾನಾ, ತನಗೆ ತುಂಬಾ ಸಂತಸವಾಗಿದ್ದು. ತನ್ನ ಗಂಡನ ಮನೆಯಲ್ಲಿ ಹಸುವನ್ನು ಚೆನ್ನಾಗಿ ನೋಡಿಕೊಳ್ಳುವುದಾಗಿ ಹೇಳಿದ್ದಾಳೆ.