ನವದೆಹಲಿ: 28 ವರ್ಷದ ಮಹಿಳೆಯೊಬ್ಬರು ಆಕಸ್ಮಿಕವಾಗಿ 5.2 ಸೆಂಟಿಮೀಟರ್ ಉದ್ದ ಕಬ್ಬಿಣದ ಪಿನ್ ನುಂಗಿದ ಘಟನೆ ಮುಂಬಯಿಯಲ್ಲಿ ನಡೆದಿದೆ.
ತಮ್ಮ ದುಪ್ಪಟ್ಟಗೆ ಮಹಿಳೆ ಪಿನ್ ಒಂದನ್ನು ಬಾಯಿಯಲ್ಲಿಟ್ಟುಕೊಂಡಿದ್ದರು. ಆದರೆ ಆ ಪಿನ್ನ ಅನ್ನು ಮಹಿಳೆ ಆಕಸ್ಮಿಕವಾಗಿ ನುಂಗಿಬಿಟ್ಟಿದ್ದಾರೆ. ನುಂಗಿದ ಪಿನ್ ನೇರವಾಗಿ ಸಣ್ಣ ಕರುಳಿಗೆ ಹೋಗಿದೆ.
ಪಿನ್ ನುಂಗಿದ ಮಹಿಳೆಗೆ ತಕ್ಷಣ ಯಾವುದೇ ನೋವು ಕಾಣಿಸಿಕೊಂಡಿಲ್ಲ, ಶೀಘ್ರವಾಗಿ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಯಿತು, ಆರು ಗಂಟೆಗಳ ನಂತರ ಹೊಟ್ಟೆನೋವು ಕಾಣಿಸಿಕೊಂಡಿತು ಎಂದು ವೈದ್ಯರು ಹೇಳಿದ್ದಾರೆ.
ಎಂಡೋಸ್ಕೋಪಿ ಮಾಡುವ ಮೂಲಕ ಅದನ್ನು ವೈದ್ಯರು ಹೊರತೆಗೆದಿದ್ದಾರೆ, ಒಂದು ವೇಳೆ ಪಿನ್ ಸ್ವಾಭಾವಿಕವಾಗಿಯೇ ಹೊರಬರಲಿ ಎಂದು ಕಾಯುತ್ತಾ ಕೂತಿದ್ದರೇ ಒಳ ಅಂಗಾಂಗಳು ತೂತು ಬೀಳುವ ಸಾಧ್ಯತೆಯಿತ್ತು ಎಂದು ವೈದ್ಯರು ತಿಳಿಸಿದ್ದಾರೆ.
ಪಿನ್ ಆಕೆಯ ಹೊಟ್ಟೆಯಲ್ಲಿರಲಿಲ್ಲ, ಬದಲಿಗೆ ಸಣ್ಣಕರುಳಿನಲ್ಲಿತ್ತು ಎಂಬುದು ಎಂಡೋಸ್ಕೋಪಿ ಮೂಲಕ ತಿಳಿಯಿತು. ವಿಶೇಷವಾದ ಎಡೋಸ್ಕೋಪಿ ಉಪಕರಣದ ಮೂಲಕ ವೈದ್ಯರು ಜಾಗರೂಕತೆಯಿಂಗ ಪಿನ್ ಅನ್ನು ಹೊರತೆಗೆದಿದ್ದಾರೆ.
ಇದಾದ ಮರುದಿನವೇ ರೋಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಸಹಜವಾಗಿ ಊಟ ತಿನ್ನುತ್ತಾ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.