ನಾಗ್ಪುರ: ಒಟ್ಟು 3,230 ಮೆಗಾ ವ್ಯಾಟ್ ಸಾಮರ್ಥ್ಯದ ಶಾಖೋತ್ಪನ್ನ ಸ್ಥಾವರ ಘಟಕಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಕ್ರವಾರ ಮಹಾರಾಷ್ಟ್ರದ ಕೊರಾಡಿ, ಚಂದ್ರಾಪುರ ಮತ್ತು ಪಾರ್ಲಿಯಲ್ಲಿ ಉದ್ಘಾಟಿಸಿದರು.
ಕೊರಾಡಿಯಲ್ಲಿ 660 ಮೆಗಾ ವ್ಯಾಟ್ ಸಾಮರ್ಥ್ಯದ ಮೂರು ಸೂಪರ್ ಕ್ರಿಟಿಕಲ್ ಯೂನಿಟ್ಸ್, ಚಂದ್ರಾಪುರದಲ್ಲಿ ಎರಡು 500 ಮೆಗಾ ವ್ಯಾಟ್ ಸಾಮರ್ಥ್ಯದ ಘಟಕಗಳು ಹಾಗೂ ಪಾರ್ಲಿಯಲ್ಲಿ 250 ಮೆಗಾವ್ಯಾಟ್ ಘಟಕದ ಘಟಕವನ್ನು ಒಳಗೊಂಡಿದೆ.
ಇದೇ ಸಂದರ್ಭದಲ್ಲಿ ಪ್ರಧಾನಿ ಗೌತಮ ಬುದ್ಧ, ಡಾ.ಬಿ.ಆರ್.ಅಂಬೇಡ್ಕರ್ ಮ್ತತು ದೀಕ್ಷಭೂಮಿಯನ್ನು ಬಿಂಬಿಸುವ ಎರಡು ವಿಶೇಷ ಸ್ಮರಣಾರ್ಥ ಅಂಚೆಚೀಟಿಗಳನ್ನು ಬಿಡುಗಡೆ ಮಾಡಿದರು. 5 ರೂಪಾಯಿ ಮುಖಬೆಲೆಯನ್ನು ಅಂಚೆಚೀಟಿಗಳು ಒಳಗೊಂಡಿವೆ.
ಮಹಾರಾಷ್ಟ್ರ ರಾಜ್ಯಪಾಲ ವಿದ್ಯಾಸಾಗರ್ ರಾವ್, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ, ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವದೇಕರ್ ಮೊದಲಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.