ಮಹಾತ್ಮರ ಜನ್ಮದಿನಾಚರಣೆಗಳಿಗೆ ರಜೆ: ಯೋಗಿ ನಂತರ ರಾಜಸ್ಥಾನ ರಾಜ್ಯಪಾಲ ಕಲ್ಯಾಣ್ ಸಿಂಗ್ ವಿರೋಧ

ಮಹಾತ್ಮರ ಜನ್ಮದಿನಾಚರಣೆಗೆ ರಜೆ ನೀಡದೇ ಇರಲು ಯೋಗಿ ಆದಿತ್ಯನಾಥ್ ಸರ್ಕಾರ ನಿರ್ಧರಿಸಿರುವ ಬೆನ್ನಲ್ಲೇ ರಾಜಸ್ಥಾನ ರಾಜ್ಯಪಾಲ ಕಲ್ಯಾಣ್ ಸಿಂಗ್ ಮಹಾತ್ಮರ ಜನ್ಮದಿನಾಚರಣೆಗೆ ರಜೆ ನೀಡುವುದನ್ನು ವಿರೋಧಿಸಿದ್ದಾರೆ.
ಕಲ್ಯಾಣ್ ಸಿಂಗ್
ಕಲ್ಯಾಣ್ ಸಿಂಗ್
ಜೈಪುರ: ಮಹಾತ್ಮರ ಜನ್ಮದಿನಾಚರಣೆಗೆ ರಜೆ ನೀಡದೇ ಇರಲು ಯೋಗಿ ಆದಿತ್ಯನಾಥ್ ಸರ್ಕಾರ ನಿರ್ಧರಿಸಿರುವ ಬೆನ್ನಲ್ಲೇ ರಾಜಸ್ಥಾನ ರಾಜ್ಯಪಾಲ ಕಲ್ಯಾಣ್ ಸಿಂಗ್ ಸಹ ಮಹಾತ್ಮರ ಜನ್ಮದಿನಾಚರಣೆಗೆ ರಜೆ ನೀಡುವುದನ್ನು ವಿರೋಧಿಸಿದ್ದಾರೆ. 
ರಜೆ ನೀಡುವ ಬದಲು ಮಹಾತ್ಮರ ಜನ್ಮದಿನಾಚರಣೆಯಂದು ವಿದ್ಯಾರ್ಥಿಗಳಿಗೆ ಅವರ ಬಗ್ಗೆ ಬೋಧಿಸಬೇಕು ಎಂದು ಕಲ್ಯಾಣ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ಅಂಬೇಡ್ಕರ್ ಜಯಂತಿ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಾತ್ಮರ ಜೀವನಚರಿತ್ರೆ ಬಗ್ಗೆ ಸೆಮಿನಾರ್ ನಡೆಸುವ ಮೂಲಕ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕು ಎಂದು ಕಲ್ಯಾಣ್ ಸಿಂಗ್ ಹೇಳಿದ್ದಾರೆ. 
ಅಂಬೇಡ್ಕರ್ ಜಯಂತಿಯಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸಹ ಮಹಾತ್ಮರ ಜನ್ಮದಿನಾಚರಣೆಯ ವೇಳೆ ಶಾಲೆಗಳಿಗೆ ರಜೆ ಇರುವುದಿಲ್ಲ ಎಂದು ಹೇಳಿದ್ದರು. ಈ ಬೆನ್ನಲ್ಲೇ ರಾಜಸ್ಥಾನ ರಾಜ್ಯಪಾಲ, ಉತ್ತರ ಪ್ರದೇಶ ಮಾಜಿ ಸಿಎಂ ಕಲ್ಯಾಣ್ ಸಿಂಗ್ ಸಹ ಯೋಗಿ ಆದಿತ್ಯನಾಥ್ ಮಾದರಿಯಲ್ಲೇ ಹೇಳಿಕೆ ನೀಡಿದ್ದು, ಮಹಾತ್ಮರ ಜನ್ಮದಿನಾಚರಣೆಗೆ ರಜೆ ನೀಡಬಾರದೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com