ಇವಿಎಂ ಮೇಲೆ ನಂಬಿಕೆಯಿಲ್ಲ, ಮುಂದಿನ ಚುನಾವಣೆಗಳಲ್ಲಿ ಬ್ಯಾಲಟ್ ಪೇಪರ್ ಬಳಸಿ: ಅಖಿಲೇಶ್ ಯಾದವ್

ಇವಿಎಂ ಮತಯಂತ್ರಗಳ ಮೇಲಿನ ಭರವಸೆ ಹುಸಿಯಾಗಿದೆ, ಹೀಗಾಗಿ ಮುಂದಿನ ಚುನಾವಣೆಗಳಲ್ಲಿ ಬ್ಯಾಲಟ್ ಪೇಪರ್ ಬಳಸುವಂತೆ ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್ ...
ಅಖಿಲೇಶ್ ಯಾದವ್
ಅಖಿಲೇಶ್ ಯಾದವ್
ಲಕ್ನೋ: ಇವಿಎಂ ಮತಯಂತ್ರಗಳ ಮೇಲಿನ ಭರವಸೆ ಹುಸಿಯಾಗಿದೆ, ಹೀಗಾಗಿ ಮುಂದಿನ ಚುನಾವಣೆಗಳಲ್ಲಿ ಬ್ಯಾಲಟ್ ಪೇಪರ್ ಬಳಸುವಂತೆ ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್ ಯಾದವ್ ಸಲಹೆ ನೀಡಿದ್ದಾರೆ.
ಯಾವಾಗ ಇವಿಎಂ ಅಡ್ಡಿಪಡಿಸುತ್ತದೋ, ಸಾಫ್ಟ್ ವೇರ್ ಯಾವಾಗ ಫೇಲಾಗುತ್ತದೆ ಎಂಬ ಬಗ್ಗೆ ಯಾರಿಗೂ ತಿಳಿದಿಲ್ಲ, ಯಂತ್ರಗಳನ್ನು ಅವಲಂಬಿಸಲಾಗುವುದಿಲ್ಲ, ಇವಿಎಂ ಗಳ ಮೇಲೆ ನಮಗೆ ನಂಬಿಕೆಯಿಲ್ಲ ಎಂದು ಅಖಿಲೇಶ್ ಹೇಳಿದ್ದಾರೆ. 
ಬ್ಯಾಲಟ್ ಪೇಪರ್ ಮೇಲೆ ನಮಗೆ ಶೇ. 100 ರಷ್ಟು ನಂಬಿಕೆಯಿದೆ. ಇವಿಎಂ ಒಳ್ಳಯದ್ದೋ, ಕೆಟ್ಟದ್ದೋ ಎಂಬುದು ನಮಗೆ ಬೇಡ ಎಂದು ಅವರು ತಿಳಿಸಿದ್ದಾರೆ. 
ಉತ್ತರ ಪ್ರದೇಶ ಚುನಾವಣೆ ಬಗ್ಗೆ ಮಾತನಾಡಿದ ಅಖಿಲೇಶ್ ಯಾದವ್ ಇಡೀ ಚುನಾವಣಾ ಪ್ರಚಾರದಲ್ಲಿ ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ದ್ವೇಷವನ್ನು ಹರಡಿತ್ತು. ಜಾತಿ ಮತ್ತು ಧರ್ಮದ ಉಪಯೋಗ ಪಡೆದು ಮತಗಳು ಚಲಾವಣೆಯಾಗಿದೆ ಎಂದು ಅಖಿಲೇಶ್ ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com