ದೆಹಲಿ ಮೆಟ್ರೋ ನಿಲ್ದಾಣದ ಜಾಹಿರಾತು ಪರದೆಯಲ್ಲಿ ಪೋರ್ನ್ ವಿಡಿಯೋ ಪ್ರಸಾರ!

ದೆಹಲಿಯ ರಾಜೀವ್ ಚೌಕ್ ಮೆಟ್ರೋ ನಿಲ್ದಾಣದ ಜಾಹಿರಾತು ಪರದೆಯಲ್ಲಿ ಜಾಹೀರಾತು ಪ್ರಕಟವಾಗುವುದರ ಬದಲು ಪೋರ್ನ್ ವಿಡಿಯೋ ಪ್ರದರ್ಶನಗೊಂಡಿದೆ.
ದೆಹಲಿ ಮೆಟ್ರೋ (ಸಂಗ್ರಹ ಚಿತ್ರ)
ದೆಹಲಿ ಮೆಟ್ರೋ (ಸಂಗ್ರಹ ಚಿತ್ರ)
ನವದೆಹಲಿ: ದೆಹಲಿಯ ರಾಜೀವ್ ಚೌಕ್ ಮೆಟ್ರೋ ನಿಲ್ದಾಣದ ಜಾಹಿರಾತು ಪರದೆಯಲ್ಲಿ ಜಾಹೀರಾತು ಪ್ರಕಟವಾಗುವುದರ ಬದಲು ಪೋರ್ನ್ ವಿಡಿಯೋ ಪ್ರದರ್ಶನಗೊಂಡಿದೆ. 
ಜಾಹೀರಾತು ಪರದೆಯಲ್ಲಿ ಪ್ರಸಾರವಾಗಿರುವ ಪೋರ್ನ್ ವಿಡಿಯೋ ಏ.9 ರಂದು ಪ್ರಯಾಣಿಕ ಮಾಡಿದ್ದು ಎಂದು ಹೇಳಲಾಗುತ್ತಿದ್ದು, ಪೋರ್ನ್ ವಿಡಿಯೋ ಪ್ರಸಾರವಾದ ಜಾಹೀರಾತು ಪರದೆಯಲ್ಲಿ ವಾಣಿಜ್ಯ ಜಾಹೀರಾತುಗಳು ಪ್ರಸಾರವಾಗಬೇಕಿತ್ತು ಎಂದು ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ (ಡಿಎಂಆರ್ ಸಿ) ಹೇಳಿದೆ. 
ಜಾಹೀರಾತು ಪರದೆಯಲ್ಲಿ ಪೋರ್ನ್ ವಿಡಿಯೋ ಪ್ರಸಾರವಾದ ವಿಡಿಯೋ ವೈರಲ್ ಆಗಿದೆ. ದೆಹಲಿ ಮೆಟ್ರೋ ರೈಲುಗಳಲ್ಲಿ 2013 ರಲ್ಲಿ ಸಿಸಿಟಿವಿಗಳನ್ನು ಅಳವಡಿಸಲಾಗಿತ್ತು. ಮೆಟ್ರೋ ರೈಲಿನಲ್ಲಿ ಸೆರೆಯಾಗಿರುವ ದೃಶ್ಯಗಳು ಡಿಎಂಆರ್ ಸಿ ಸಿಬ್ಬಂದಿಗಳು ಹಾಗೂ ಭದ್ರತೆಯ ಉಸ್ತುವಾರಿ ವಹಿಸಿಕೊಂಡಿರುವ ಸಿಐಎಸ್ಎಫ್ ಸಿಬ್ಬಂದಿಗಳಿಗೆ ಮಾತ್ರ ಲಭ್ಯವಿರುತ್ತವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com