ನವದೆಹಲಿ: ವಿವಾದಿತ ಧಾರ್ಮಿಕ ಪ್ರವಚನಕಾರ ಜಾಕೀರ್ ನಾಯಕ್ ಆಪ್ತಮಿತ್ರ ಅಮೀರ್ ಗಜ್ದಾರ್ ವಿರುದ್ಧ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿದೆ.
ಹಣ ವರ್ಗಾವಣೆ ಆರೋಪದ ಮೇಲೆ ಅಮೀರ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಕಾಯ್ದೆ ಅಡಿ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿದೆ. ಇಡಿ ಕಳೆದ ಫೆಬ್ರವರಿ 16ರಂದು ಅಮೀರ್ ನನ್ನು ಬಂಧಿಸಿತ್ತು.
ಜಾರಿ ನಿರ್ದೇಶನಾಯಲಯ 250 ಪುಟಗಳ ಜಾರ್ಜ್ ಶೀಟ್ ಅನ್ನು ಐವರ ವಿರುದ್ಧ ದಾಖಲಿಸಿದೆ. ಅಮೀರ್ ಗಜ್ಧಾರ್, ಜಾಕೀರ್ ನಾಯಕ್ ರ ಸಹೋದರಿ, ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ಅಕೌಂಟ್ ವಿರುದ್ಧ ಜಾರ್ಜ್ ಶೀಟ್ ದಾಖಲಿಸಲಾಗಿದೆ.