ತ್ರಿವಳಿ ಕೊಲೆ ಪ್ರಕರಣ: ಮಾಜಿ ಆರ್‌ಜೆಡಿ ಸಂಸದ ಶಹಾಬುದ್ದೀನ್ ಖುಲಾಸೆ

1989ರ ತ್ರಿವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ) ಸಂಸದ ಮಹಮ್ಮದ್ ಶಹಾಬುದ್ದೀನ್ ರನ್ನು ಸ್ಥಳೀಯ...
ಮಹಮ್ಮದ್ ಶಹಾಬುದ್ದೀನ್
ಮಹಮ್ಮದ್ ಶಹಾಬುದ್ದೀನ್
ಜೆಮ್‌ಶೆಡ್‌ಪುರ(ಜಾರ್ಖಂಡ್): 1989ರ ತ್ರಿವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ) ಸಂಸದ ಮಹಮ್ಮದ್ ಶಹಾಬುದ್ದೀನ್ ರನ್ನು ಸ್ಥಳೀಯ ನ್ಯಾಯಾಲಯ ಖುಲಾಸೆಗೊಳಿಸಿದೆ. 
ಕೊಲೆ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್ ಕಳೆದ ಫೆಬ್ರವರಿ 15ರಂದು ಬಿಹಾರದ ಸಿವಾನ್ ಜೈಲಿನಿಂದ ದೆಹಲಿಯ ತಿಹಾರ್ ತೈಲಿಗೆ ಸ್ಥಳಾಂತರಿಸುವಂತೆ ಆದೇಶ ನೀಡಿತ್ತು. 
ಸಿಪಿಐ ನಾಯಕ ಛೋಟೇಲಾಲ್ ಗುಪ್ತ ಅವರನ್ನು ಸಿವಾನ್ ಜಿಲ್ಲೆಯಲ್ಲಿ 1999ರಲ್ಲಿ ಅಪಹರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಹಾಬುದ್ದೀನ್ ತಪ್ಪಿತಸ್ಥ ಎಂದು ನ್ಯಾಯಾಲಯ ಪರಿಗಣಿಸಿ ಶಹಾಬುದ್ದೀನ್ ಗೆ ಜೀವಾವಧಿ ಕಠಿಣ ಶಿಕ್ಷೆ ನೀಡಿತ್ತು. 
ಇನ್ನು ಕಳೆದ ವರ್ಷ 42 ವರ್ಷದ ರಾಜನ್ ರಾಜ್ ಡೇ ಅವರನ್ನು ಕಳೆದ ವರ್ಷ ಗುಂಡಿಟ್ಟು ಹತ್ಯೆ ಪ್ರಕರಣದಲ್ಲೂ ಶಹಾಬುದ್ದೀನ್ ಹೆಸರು ಕೇಳಿಬಂದಿದೆ. ಇದೇ ರೀತಿ 45 ಕ್ರಿಮಿನಲ್ ಪ್ರಕರಣಗಳು ಶಹಾಬುದ್ದೀನ್ ಮೇಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com