ಗ್ರಾಮೀಣ ಭಾರತದಲ್ಲಿ ಭೀಮ್ ಪರಿಚಯವಿರುವುದು ಕೇವಲ ಶೇ.35.7 ಜನರಿಗೆ!

ಭಾರತ್ ಇಂಟರ್ಫೇಸ್ ಫಾರ್ ಮನಿ (ಭೀಮ್) ಆಪ್ ಮೂಲಕ ಭಾರತ ಸರ್ಕಾರ ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸಲು ಕ್ರಮ ಕೈಗೊಂಡಿದೆ.
ಭೀಮ್
ಭೀಮ್
ನವದೆಹಲಿ: ಭಾರತ್ ಇಂಟರ್ಫೇಸ್ ಫಾರ್ ಮನಿ (ಭೀಮ್) ಆಪ್ ಮೂಲಕ ಭಾರತ ಸರ್ಕಾರ ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸಲು ಕ್ರಮ ಕೈಗೊಂಡಿದೆ. ಈಗಾಗಲೇ ಭೀಮ್ ಆಪ್ 10 ಮಿಲಿಯನ್ ಬಳಕೆದಾರರನ್ನು ಹೊಂದಿದೆ. ಆದರೆ ಗ್ರಾಮೀಣ ಭಾರತದಲ್ಲಿ ಭೀಮ್ ಆಪ್ ಪರಿಚಯವಿರುವುದು ಕೇವಲ ಶೇ.35.7 ಜನರಿಗೆ ಮಾತ್ರ ಎಂದು ಸಮೀಕ್ಷೆಯೊಂದು ತಿಳಿಸಿದೆ. 
ಡಿಸೆಂಬರ್ ನಲ್ಲಿ ಲೋಕಾರ್ಪಣೆಗೊಂಡ ಭೀಮ್ ಆಪ್ ಬಗ್ಗೆ ಗ್ರಾಮೀಣ ಭಾಗದ ಜನತೆಗೆ ಎಷ್ಟು ತಿಳಿದಿದೆ ಎಂಬ ಬಗ್ಗೆ ಬ್ರಿಕ್ ವರ್ಕ್ಸ್ ಮೀಡಿಯಾ ಸಮೀಕ್ಷೆ ನಡೆಸಿದ್ದು, ಗ್ರಾಮೀಣ ಭಾಗದಲ್ಲಿ ಸಮೀಕ್ಷೆಗೆ ಒಳಪಟ್ಟವರ ಶೇ.16.2 ರಷ್ಟು ಜನರು ಮಾತ್ರ ಭೀಮ್ ಆಪ್ ನ್ನು ಡೌನ್ ಲೋಡ್ ಮಾಡಿಕೊಂಡಿದ್ದಾರೆ, ಸಮೀಕ್ಷೆಗೆ ಉತ್ತರಿಸಿದವರ ಪೈಕಿ ಶೇ.9 ರಷ್ಟು ಜನರಿಗೆ ಮಾತ್ರ ಭೀಮ್ ಆಪ್ ಬಗ್ಗೆ ಸಂಪೂರ್ಣ ತಿಳಿದಿದೆ ಎಂದು ಬ್ರಿಕ್ ವರ್ಕ್ಸ್ ಮೀಡಿಯಾ ತಿಳಿಸಿದೆ.
ದೇಶಾದ್ಯಂತ ಗ್ರಾಮೀಣ ಭಾಗದ 5,478 ಜನರು ಸಮೀಕ್ಷೆಗೆ ಉತ್ತರಿಸಿದ್ದು, ಶೇ.9 ರಷ್ಟು ಜನರು ಮಾತ್ರ ತಮ್ಮ ಅಗತ್ಯತೆಗಳಿಗೆ ಭೀಮ್ ಆಪ್ ನ್ನು ಬಳಕೆ ಮಾಡಿದ್ದಾರೆ. ಶೇ.15 ರಷ್ಟು ಜನರು ಭೀಮ್ ಆಪ್ ಬಳಕೆ ಸುಲಭವಾಗಿದೆ ಎಂದು ಹೇಳಿದ್ದರೆ, ಶೇ.20 ರಷ್ಟು ಜನರು ಭೀಮ್ ಆಪ್ ಬಳಕೆ ಸುರಕ್ಷಿತವಾಗಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಾರೆ ಗ್ರಾಮೀಣ ಭಾಗದಲ್ಲಿ ಭೀಮ್ ಆಪ್ ಬಗ್ಗೆ ಶೇ.35.7 ರಷ್ಟು ಜನತೆ ಮಾತ್ರ ತಿಳಿದಿದ್ದಾರೆ ಎಂದು ಸಮೀಕ್ಷೆ ಹೇಳಿದೆ. 
500, 1000 ರೂ ನೋಟುಗಳ ನಿಷೇಧದ ನಂತರ ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸುವ ಸಲುವಾಗಿ ಭೀಮ್ ಆಪ್ ನ್ನು ಲೋಕಾರ್ಪಣೆಗೊಳಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com