ಇನ್ನು ಮುಂದೆ ಹಿಂದಿಯಲ್ಲಿ ರಾಷ್ಟ್ರಪತಿ, ಪ್ರಧಾನಿ, ಮಂತ್ರಿಗಳ ಭಾಷಣ?

ರಾಷ್ಟ್ರಪತಿ, ಪ್ರಧಾನ ಮಂತ್ರಿಗಳು ಇನ್ನು ಮುಂದಿನ ದಿನಗಳಲ್ಲಿ ಹಿಂದಿಯಲ್ಲಿಯೇ ಸಾಧ್ಯವಾದಷ್ಟು ಭಾಷಣ ಮಾಡಬೇಕೆಂಬ ಸಂಸದೀಯ ಸಮಿತಿಯೊಂದರ ಶಿಫಾರಸ್ಸಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಒಪ್ಪಿಗೆ ಸೂಚಿಸಿದ್ದಾರೆ.
ರಾಷ್ಟ್ರಪತಿ
ರಾಷ್ಟ್ರಪತಿ
ನವದೆಹಲಿ: ರಾಷ್ಟ್ರಪತಿ, ಪ್ರಧಾನ ಮಂತ್ರಿಗಳು ಇನ್ನು ಮುಂದಿನ ದಿನಗಳಲ್ಲಿ ಹಿಂದಿಯಲ್ಲಿಯೇ ಸಾಧ್ಯವಾದಷ್ಟು ಭಾಷಣ ಮಾಡಬೇಕೆಂಬ ಸಂಸದೀಯ ಸಮಿತಿಯೊಂದರ ಶಿಫಾರಸ್ಸಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಒಪ್ಪಿಗೆ ಸೂಚಿಸಿದ್ದಾರೆ. ಸಂಸದೀಯ ಸಮಿತಿಯ ಶಿಫಾರಸುಗಳು ಜಾರಿಗೊಂಡಲ್ಲಿ ಇನ್ನು ಮುಂದೆ ರಾಷ್ಟ್ರಪತಿ, ಪ್ರಧಾನ ಮಂತ್ರಿಗಳು ಸೇರಿದಂತೆ ಗಣ್ಯರು ಹಿಂದಿಯಲ್ಲೇ ಭಾಷಣ ಮಾಡಬೇಕಾಗುತ್ತದೆ. 
ಅಧಿಕೃತ ಭಾಷೆಗೆ ಸಂಬಂಧಿಸಿದ ಸಂಸದೀಯ ಸಮಿತಿ ಈ ಶಿಫಾರಸು ನೀಡಿದ್ದು, ಶಿಫಾರಸ್ಸಿನಲ್ಲಿರುವ ಹಲವು ಅಂಶಗಳಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಂಕಿತ ಹಾಕಿದ್ದಾರೆ. ಭಾರತೀಯ ವಿಮಾನಗಳಲ್ಲಿನ ಪ್ರಕಟಣೆಗಳು ಹಿಂದಿಯಲ್ಲಿರಬೇಕು, ಓದುವ ಪತ್ರಿಕೆಗಳ ಪೈಕಿ ಅರ್ಧದಷ್ಟು ಪತ್ರಿಕೆಗಳು ಹಿಂದಿ ಪತ್ರಿಕೆ, ಮ್ಯಾಗಜೀನ್ ಗಳಾಗಿರಬೇಕು ಎಂಬುದು ಶಿಫಾರಸ್ಸಿನ ಭಾಗಗಳಾಗಿವೆ. 
ನಾಗರಿಕ ವಿಮಾನಯಾನ ಸಚಿವಾಲಯ ಸಂಸದೀಯ ಸಮಿತಿಗೆ ಶಿಫಾರಸ್ಸುಗಳನ್ನು ಜಾರಿಗೆ ತರುವಂತೆ ಸೂಚನೆ ನೀಡಲಾಗಿದ್ದು, ಏರ್ ಇಂಡಿಯಾ ಪವನ್ ಹಂಸ್ ವಿಮಾನಗಳಲ್ಲಿ ಹಿಂದಿ ಭಾಷೆಯಲ್ಲಿ ಟಿಕೆಟ್ ಗಳನ್ನು ಮುದ್ರಿಸಬೇಕು ಎಂಬ ಸೂಚನೆಯನ್ನೂ ನೀಡಲಾಗಿದೆ. 
ಇನ್ನು ನಾಗರಿಕ ಸೇವೆಗಳಿಗೆ ಅಭ್ಯರ್ಥಿಗಳನ್ನು ತಯಾರಿಸುವ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಅಕಾಡೆಮಿಯಲ್ಲಿ ಅಧ್ಯಯನ ಸಾಮಗ್ರಿಗಳು ಸಹ ಶೇ.100 ಹಿಂದಿ ಭಾಷೆಯಲ್ಲಿ ಲಭ್ಯವಿರಬೇಕು, ಪಠ್ಯಕ್ರಮದಲ್ಲಿ ಹಿಂದಿ ಭಾಷೆಯನ್ನು ಕಡ್ಡಾಯಗೊಳಿಸುವುದು, ಸಿಬಿಎಸ್ಇ, ಕೇಂದ್ರೀಯ ವಿದ್ಯಾಲಯ ಸಂಘಟನೆಗಳ ಶಾಲೆಗಳಲ್ಲಿ 10 ನೇ ತರಗತಿ ವರೆಗೂ ಹಿಂದಿ ಕಡ್ಡಾಯಗೊಳಿಸುವುದು ಸೇರಿದಂತೆ ಹಲವು ಶಿಫಾರಸ್ಸನ್ನೂ ಸಹ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಂಗೀಕರಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com