ಏ.15 ರವರೆಗೆ ಸಂಗ್ರಹವಾಗಿರುವ ಮಾಹಿತಿಯ ಪ್ರಕಾರ ಐಟಿ ಇಲಾಖೆ 250 ಶೋಧಕಾರ್ಯಾಚರಣೆ ಹಾಗೂ ಸಮೀಕ್ಷೆ ಕಾರ್ಯಾಚರಣೆಗಳನ್ನು ನಡೆಸಲಾಗಿದ್ದು, ನಾಮ್ ಕೇ ವಾಸ್ತೆ ನಡೆಯುತ್ತಿದ್ದ ಕನಿಷ್ಠ 300 ಸಂಸ್ಥೆಗಳನ್ನು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಅಘೋಷಿತ ಆಸ್ತಿಯನ್ನು ಘೋಷಿಸಿಕೊಳ್ಳುವುದಕ್ಕಾಗಿ ಜಾರಿಗೊಳಿಸಲಾಗಿದ್ದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಮುಕ್ತಾಯಗೊಂಡ ಬೆನ್ನಲ್ಲೇ ಬೃಹತ್ ಪ್ರಮಾಣದ ಮೊತ್ತ ಬಹಿರಂಗವಾಗಿರುವುದು ಮಹತ್ವ ಪಡೆದುಕೊಂಡಿದೆ. ಐಟಿ ಇಲಾಖೆಯ ದಾಳಿ ಹೀಗೆಯೇ ಮುಂದುವರೆಯಲಿದ್ದು, ಮತ್ತಷ್ಟು ಕಪ್ಪುಹಣ ಬಯಲಿಗೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.