ತ್ರಿವಳಿ ತಲಾಖ್ ಅಂತರ್ಧರ್ಮೀಯ ವಿವಾಹವಾಗುವ ಹಿಂದೂ ಮಹಿಳೆಯರಿಗೆ ಅನ್ವಯವಾಗಬಾರದು: ಪಿಐಎಲ್

ಮುಸ್ಲಿಮ್ ಪುರುಷರನ್ನು ವಿವಾಹವಾಗುವ ಹಿಂದೂ ಮಹಿಳೆಯರಿಗೆ ತ್ರಿವಳಿ ತಲಾಖ್ ಅನ್ವಯವಾಗಬಾರದು ಎಂಬ ಆದೇಶ ನೀಡಲು ಮನವಿ ಮಾಡಿ ದೆಹಲಿ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ತ್ರಿವಳಿ ತಲಾಖ್
ತ್ರಿವಳಿ ತಲಾಖ್
ನವದೆಹಲಿ: ತ್ರಿವಳಿ ತಲಾಖ್, ಬಹುಪತ್ನಿತ್ವ ಸೇರಿದಂತೆ ಮುಸ್ಲಿಮರ ವೈಯಕ್ತಿಕ ಕಾನೂನಿನ ಅಂಶಗಳು ಮುಸ್ಲಿಮ್ ಪುರುಷರನ್ನು ವಿವಾಹವಾಗುವ ಹಿಂದೂ ಮಹಿಳೆಯರಿಗೆ ಅನ್ವಯವಾಗಬಾರದು ಎಂಬ ಆದೇಶ ನೀಡಲು ಮನವಿ ಮಾಡಿ ದೆಹಲಿ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. 
ದೆಹಲಿ ಹೈಕೋರ್ಟ್ ನ ಹಂಗಾಮಿ ಮುಖ್ಯ ನ್ಯಾಯಾಧೀಶರಾಗಿರುವ ಗೀತಾ ಮಿಟ್ಟಲ್ ಅವರು ಪಿಐಎಲ್ ನ ವಿಚಾರಣೆ ನಡೆಸಲಿದ್ದಾರೆ. ಅಡ್ವೊಕೇಟ್ ವಿಜಯ್ ಶುಕ್ಲಾ ಮುಸ್ಲಿಮರನ್ನು ವಿವಾಹವಾಗುವ ಹಿಂದೂ ಮಹಿಳೆಯರಿಗೆ ತ್ರಿವಳಿ ತಲಾಖ್ ಅನ್ವಯವಾಗಬಾರದು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ವಿಶೇಷ ವಿವಾಹ ಕಾಯ್ದೆ ಅಥವಾ ಕಡ್ಡಾಯ ವಿವಾಹ ನೋಂದಣಿ ಕಾಯ್ದೆಯಡಿಯಲ್ಲಿ ಅಂತರ್ಧರ್ಮೀಯ ವಿವಾಹಗಳ ನೋಂದಣಿಯನ್ನು ಕಡ್ಡಾಯಗೊಳಿಸಲು ಕೇಂದ್ರಕ್ಕೆ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದ್ದಾರೆ. 
ನಿಕ್ಕಾನಾಮ( ವಿವಾಹ ಒಪ್ಪಂದ)ವನ್ನು ಉರ್ದು ಭಾಷೆಯಲ್ಲಿ ಬರೆಯಲಾಗಿದೆ. ಆದರೆ ಹಿಂದೂ ಮಹಿಳೆಯರು ಅದರಲ್ಲಿರುವ ಅಂಶಗಳನ್ನು ತಿಳಿಯುವುದಕ್ಕೆ ವಿಫಲರಾಗುತ್ತಾರೆ. ಮುಸ್ಲಿಂ ಮೌಲ್ವಿಗಳು ಈ ಅಂಶಗಳನ್ನು ಹಿಂದೂ ಮಹಿಳೆಯರಿಗೆ ಅವರ ಮಾತೃಭಾಷೆಯಲ್ಲಿಯೇ ತಿಳಿಯುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಪಿಐಎಲ್ ನಲ್ಲಿ ಆಗ್ರಹಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com